ಕ್ರೈಂ ಸ್ಟೋರಿ

ಇನ್ಸ್ಟಾದಲ್ಲಿ ರಜತ್&ವಿನಯ್ ರೀಲ್ಸ್ ಶೋಕಿ.. ಘರ್ಜಿಸಿದ ಖಾಕಿ

ಬೆಂಗಳೂರು: ಕೈಯಲ್ಲಿ ಮಚ್ಚು ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಇನ್ಸ್ಟಾ ರೀಲ್ಸ್ ಮಾಡಿದ್ದ ಮಾಜಿ ಬಿಗ್​ ಬಾಸ್​ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ವಿರುದ್ಧ FIR ದಾಖಲಾಗಿದೆ.

ಬಸವೇಶ್ವರ ನಗರ ಪೊಲೀಸ್ ಠಾಣೆಯ ಸಾಮಾಜಿಕ ಜಾಲತಾಣ ಘಟಕದ ಉಸ್ತುವಾರಿ ಪಿಎಸ್ಐ ಭಾನುಪ್ರಕಾಶ್ ಎಂಬವರು ನೀಡಿದ ದೂರಿನನ್ವಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಬಿಎನ್​ಸಿ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಜತ್ ಕಿಶನ್ ಹಾಗೂ ವಿನಯ್ ಗೌಡ ಮಾರಕಾಸ್ತ್ರ ಹಿಡಿದು ಸುಮಾರು 18 ಸೆಕೆಂಡ್‌ಗಳ ಶಾರ್ಟ್ ವಿಡಿಯೋ ಮಾಡಿದ್ದು, ಅದನ್ನು ರಜತ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದರು. ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಶಾಂತಿಭಂಗದ ದುರ್ವರ್ತನೆ ತೋರಲಾಗಿದೆ ಎಂದು FIR ದಾಖಲಾಗುತ್ತಿದ್ದಂತೆ, ಇದೀಗ ರಜತ್ ತಮ್ಮ ಇನ್ಸ್ಟಾಗ್ರಾಮ್​ ಅಕೌಂಟ್​ನಿಂದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಇನ್ನು ಇತ್ತ ವಿನಯ್ ಗೌಡ್ ರೀಲ್ಸ್ ಮಾಡಿದ್ದಕ್ಕೆ ಕ್ಷಮೆಯಾಚನೆ ಮಾಡಿದ್ದು, ಆರ್​ಆರ್​ ನಗರ ಪೋಲಿಸ್​ ಠಾಣೆಗೆ ಸ್ಪಷ್ಟನೆ ನೀಡಿ ಪತ್ರ ಬರೆದಿದ್ದಾರೆ.

Comments (0)

Your email address will not be published. Required fields are marked *

Back to top button