Top Newsಮನರಂಜನೆರಾಜ್ಯಸುದ್ದಿ

ಬಿಗ್ ಬಾಸ್​ ಮನೆಯಲ್ಲಿ ರಜತ್ ಹೊಸ ಲುಕ್ ಹೇಗಿದೆ ನೋಡಿ..

ಬಿಗ್ ಬಾಸ್ ಮನೆಯಲ್ಲಿ ರಜತ್ ಅವರು ಸಖತ್ ಹೈಲೈಟ್ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರು ನಡೆದುಕೊಳ್ಳುತ್ತಿರುವ ರೀತಿ. ಅವರು ಬಂದಾಗಿನಿಂದಲೂ ಸಖತ್ ರಗಡ್ ಆಗಿ ಆಟ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

ಈಗ ರಜತ್ ಅವರು ದಿಟ್ಟ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಅವರು ತಲೆ ಬೋಳಿಸಿಕೊಳ್ಳೋ ಚಾಲೆಂಜ್​ನ ಸ್ವೀಕರಿಸಿದ್ದಾರೆ. ಹೌದು, ಬಿಗ್ ಬಾಸ್ ಮನೆಯಲ್ಲಿ ರಜತ್ ತಲೆ ಬೋಳಿಸಿಕೊಂಡಿದ್ದು ಫೋಟೋ ವೈರಲ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಪ್ರತಿ ತಂಡದವರು ಎದುರಾಳಿ ತಂಡಕ್ಕೆ ಒಂದು ಚಾಲೆಂಜ್ ನೀಡಬೇಕು. ಈ ಚಾಲೆಂಜ್​ನ ಸ್ವೀಕರಿಸಿ, ಅದನ್ನು ಮಾಡಿದರೆ ತಂಡ ಗೆದ್ದಂತೆ. ಈ ಪ್ರಕ್ರಿಯೆಯಲ್ಲಿ ನಾನಾ ರೀತಿಯ ಚಾಲೆಂಜ್​ನ ನೀಡಲಾಗಿದೆ.

ಅದರಲ್ಲಿ ರಜತ್​ಗೆ ನೀಡಿದ ಚಾಲೆಂಜ್ ಕೂಡ ಒಂದು. ಒಂದು ವ್ಯಕ್ತಿ ಸುಂದರವಾಗಿ ಕಾಣಲು ತಲೆ ಕೂದಲು ತುಂಬಾನೇ ಮುಖ್ಯ. ಆದರೆ, ಈ ತಲೆಕೂದಲನ್ನೇ ಬೋಳಿಸಿಕೊಳ್ಳಲು ಹೇಳಿದರೆ? ಹೀಗೊಂದು ಚಾಲೆಂಜ್​ನ ರಜತ್ ಅವರಿಗೆ ನೀಡಲಾಗಿದೆ.

ಇದಕ್ಕೆ ಹಿಂದೆ ಮುಂದೆ ಯೋಚಿಸದೆ ರಜತ್ ಒಪ್ಪಿಕೊಂಡಿದ್ದಾರೆ. ರಜತ್ ಅವರ ತಲೆಯನ್ನು ಮಂಜು ಅವರು ಟ್ರಿಮ್ಮರ್ ಮೂಲಕ ಬೋಳಿಸಿದರು.

Comments (0)

Your email address will not be published. Required fields are marked *

Back to top button