ಸಿನಿಮಾ

ಧುರಂಧರ್ 2′ ಚಿತ್ರಕ್ಕೆ ರಾಜಮೌಳಿ ಫಿದಾ; ರಣ್‌ವೀರ್ ಸಿಂಗ್ ನಟನೆ ವರ್ಣನೆ!

ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ಎಸ್.ಎಸ್. ರಾಜಮೌಳಿ ಆದಿತ್ಯ ಧರ್ ನಿರ್ದೇಶನದ ಮತ್ತು ರಣ್‌ವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಈ ಸಿನಿಮಾ ಮೊದಲ ಭಾಗಕ್ಕಿಂತಲೂ ಮಿಗಿಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜಮೌಳಿ ‘ಧುರಂಧರ್ 2’ ಕುರಿತು ಮೆಚ್ಚುಗೆಯ ಮಾತುಗಳಾಡಿದ್ದಾರೆ “ನನಗೆ ‘ಧುರಂಧರ್ 1’ ಇಷ್ಟವಾಗಿತ್ತು, ಆದರೆ ಈ ಎರಡನೇ ಭಾಗ ಸ್ಕೇಲ್ ಮತ್ತು ಎಮೋಷನ್ ಎರಡರಲ್ಲೂ ಮೊದಲ ಭಾಗವನ್ನು ಮೀರಿಸಿದೆ” ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.ರಣ್‌ವೀರ್ ಸಿಂಗ್ ಅವರ ಅಭಿನಯವನ್ನು “ಮಾಸ್ಟರ್‌ಕ್ಲಾಸ್” ಎಂದು ಕರೆದಿರುವ ಅವರು, ಚಿತ್ರದ ಕ್ಲೈಮ್ಯಾಕ್ಸ್ ಮತ್ತು ಕೆಲವು ಭಾವನಾತ್ಮಕ ಸನ್ನಿವೇಶಗಳಲ್ಲಿ ರಣ್‌ವೀರ್ ಅದ್ಭುತವಾಗಿ ನಟಿಸಿದ್ದಾರೆ ಎಂದು ಹೊಗಳಿದ್ದಾರೆ.4 ಗಂಟೆಗಳ ಸುದೀರ್ಘ ಸಿನಿಮಾವನ್ನು ಪ್ರೇಕ್ಷಕರು ಸೀಟಿನ ಅಂಚಿನಲ್ಲಿ ಕುಳಿತು ನೋಡುವಂತೆ ಮಾಡುವಲ್ಲಿ ಆದಿತ್ಯ ಧರ್ ಯಶಸ್ವಿಯಾಗಿದ್ದಾರೆ. ಅವರ ಧೈರ್ಯ ಮತ್ತು ಮೇಕಿಂಗ್ ಶೈಲಿ ಅದ್ಭುತ ,ಚಿತ್ರದ ಹಿನ್ನೆಲೆ ಸಂಗೀತ, ಸಂಭಾಷಣೆ ಮತ್ತು ತಾಂತ್ರಿಕ ಅಂಶಗಳು ಅಚ್ಚುಕಟ್ಟಾಗಿವೆ ಎಂದು ರಾಜಮೌಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್ 2
ಕೇವಲ ಎರಡು ದಿನಗಳಲ್ಲಿ ಈ ಚಿತ್ರವು ವಿಶ್ವಾದ್ಯಂತ ₹250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಬಾಲಿವುಡ್‌ನ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳತ್ತ ಮುನ್ನುಗ್ಗುತ್ತಿದೆ. ರಾಜಮೌಳಿ ಮಾತ್ರವಲ್ಲದೆ ಟಾಲಿವುಡ್‌ನ ಸ್ಟಾರ್‌ಗಳಾದ ಅಲ್ಲು ಅರ್ಜುನ್, ಮಹೇಶ್ ಬಾಬು ಮತ್ತು ಜೂನಿಯರ್ ಎನ್‌ಟಿಆರ್ ಕೂಡ ಈ ಚಿತ್ರವನ್ನು ಕೊಂಡಾಡಿದ್ದಾರೆ.

Comments (0)

Your email address will not be published. Required fields are marked *

Back to top button