ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್ಸಿಬಿ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.
ಭಾರತ ಪಾಕಿಸ್ತಾನ ನಡುವಿನ ಯುದ್ಧದ ಬಳಿಕ ಐಪಿಎಲ್-2025 ಮತ್ತೆ ಕಿಕ್ ಸ್ಟಾರ್ಟ್ ಪಡೆದಿತ್ತು. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಹಾಗೂ KKR ಟೀಂ ಸೆಣೆಸಬೇಕಿತ್ತು. ಆರ್ಸಿಬಿ ಪಾಲಿಗೆ ಇದು 12ನೇ ಪಂದ್ಯ ಆಗಿದ್ದು, ಕೋಲ್ಕತ್ತಾ ವಿರುದ್ಧ ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ನಿರೀಕ್ಷೆ ಇಟ್ಟು ಕೊಂಡಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಭಾರಿ ಮಳೆ ಆಗುತ್ತಿದೆ.
ಭಾರಿ ಮಳೆಯಿಂದ ಪಂದ್ಯ ತಡವಾಗಿ ಶುರುವಾಗುವ ಸಾಧ್ಯತೆ ಇದೆ. ಒಂದು ವೇಳೆ ತಡವಾಗಿ ಪಂದ್ಯ ಶುರುವಾದರೆ ಓವರ್ಗಳನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ನಿಲ್ಲದೆ ಪಂದ್ಯವೇ ರದ್ದಾದರೆ ಎರಡೂ ತಂಡಗಳು 1-1 ಅಂಕವನ್ನು ಹಂಚಿಕೊಳ್ಳಲಿದೆ.
ಪಂದ್ಯ ರದ್ದಾದರೂ ಕೂಡ RCB ತಂಡ 12 ಪಂದ್ಯಗಳಿಂದ 17 ಪಾಂಯಿಂಟ್ಸ್ ಪಡೆದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ.