ನೂತನ ಪಿಂಚಣಿ ವಿಧಾನವನ್ನು (NPS)ರದ್ದು ಮಾಡಿ ಅದರ ಸ್ಥಾನದಲ್ಲಿ ಮತ್ತೆ ಹಳೆಯ ಪಿಂಚಣಿ ವಿಧಾನವನ್ನು (OPS)ಜಾರಿ ಮಾಡಬೇಕು ಎಂದು ರೈಲ್ವೇ ಉದ್ಯೋಗಿಗಳು, ಕಾರ್ಮಿಕ ಸಂಘಟನೆಗಳು (Railway Union)ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ
ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಮೇ 1ರಿಂದ ಇಡೀ ದೇಶದಲ್ಲಿ ರೈಲು ಸೇವೆಗಳನ್ನು ಮಾಡುವುದಾಗಿ ರೈಲ್ವೇ ಉದ್ಯೋಗಿಗಳು, ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಓಪಿಎಸ್ ಮರುಜಾರಿ ಮಾಡಬೇಕೆಂಬ ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿಲ್ಲ. ಇದಕ್ಕಾಗಿ ರೈಲ್ವೇ ಸೇವೆ ಬಂದ್ ಮಾಡಿ ಮುಷ್ಕರ ನಡೆಸುವುದು ಬಿಟ್ಟು ಬೇರೆ ಮಾರ್ಗ ನಮಗೆ ಕಾಣಿಸುತ್ತಿಲ್ಲ ಎಂದು ಜಾಯಿಂಟ್ ಫೋರಂ ಫರ್ ರೆಸ್ಟೋರೇಷನ್ ಆಫ್ ಓಲ್ಡ್ ಪೆನ್ಶನ್ ಸ್ಕೀಮ್ (JFROPS) ಸಂಚಾಲಕ ಶಿವಗೋಪಾಲ್ ಮಿಶ್ರಾ ಹೇಳಿಕೆ ನೀಡಿದ್ದಾರೆ.
ವೇದಿಕೆ ಪರವಾಗಿ ಮಾರ್ಚ್ 19ರಂದು ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ್ (Ashwini Vaishnav)ಭೇಟಿ ಮಾಡಿ ರೈಲ್ವೇ ಮುಷ್ಕರ ಮಾಡುವ ವಿಚಾರವಾಗಿ ನೊಟೀಸ್ ನೀಡಲು ನಿರ್ಧರಿಸಲಾಗಿದೆ.
ಹೊಸ ಪೆನ್ಶನ್ ವಿಧಾನ ಕಾರ್ಮಿಕರ ಹಿತಕ್ಕೆ ಪೂರಕವಾಗಿಲ್ಲ ಎಂದು ಶಿವಗೋಪಾಲ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.