Top Newsಕ್ರೈಂ ಸ್ಟೋರಿರಾಜ್ಯಸುದ್ದಿ

ರಾಯಚೂರು: ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿತ!

ರಾಯಚೂರು : ವ್ಯಕ್ತಿ ಸಾವಿಗೆ ಪರಿಚಯಸ್ಥ ಮಹಿಳೆಯೇ ಕಾರಣವೆಂದು ಆರೋಪಿಸಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ನಡೆದಿದೆ. ಸದ್ಯ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ರಕ್ಷಿಸಿದ ಜಾಲಹಳ್ಳಿ ಠಾಣೆ ಪೊಲೀಸರು ಹಲ್ಲೆ ಆರೋಪದಡಿ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಬಸವರಾಜ ನಾಯಕ, ಯಂಕಮ್ಮ, ದುರ್ಗಮ್ಮ, ರೇಣುಕಾರಿಂದ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ. ಬಸವರಾಜನ ಅಣ್ಣ ರಂಗಪ್ಪ ಸಾವಿಗೆ ಮಹಿಳೆ ಕಾರಣವೆಂದು ಆರೋಪಿಸಿದ್ದಾರೆ. 20 ದಿನದ ಹಿಂದೆ ಮೂರ್ಛೆ ರೋಗದಿಂದ ದುರುಗಪ್ಪ ಎಂಬಾತ ಮೃತಪಟ್ಟಿದ್ದನು. ಆತ ಪರಿಚಯವಿದ್ದ ಮಹಿಳೆಯ ಜೊತೆಗೆ ತೆರಳಿದ್ದಾಗ ವ್ಯಕ್ತಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಅನುಮಾನದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ತಳಿಸಿದ್ದಾರೆ. ನೂರಾರು ಜನರ ಎದುರು ಮನಬಂದಂತೆ ಬೈದು, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button