ರಾಜಕೀಯರಾಜ್ಯಸುದ್ದಿ

ರಾಹುಲ್ ಗಾಂಧಿಯ ವೋಟ್‌ಚೋರಿ ಹೇಳಿಕೆ ಚೈಲ್ಡಿಶ್ ಆಗಿದೆ- ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವೋಟ್ ಚೋರಿ ಬಗ್ಗೆ ಆರೋಪ ಮಾಡಿರುವುದಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ರಾಹುಲ್ ಗಾಂಧಿಯ ಹೇಳಿಕೆಗಳನ್ನು ಚೈಲ್ಡಿಶ್ ಹೇಳಿಕೆ, ಇದು ರಾಜಕೀಯವಾಗಿ ಅಪಕ್ವತೆಯ ಸಂಕೇತ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿಯಿಂದ ಮತ್ತೆ ವೋಟ್‌ಚೋರಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿಯದ್ದು ಚೈಲ್ಡಿಶ್ ಹೇಳಿಕೆ. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡು ವೋಟ್‌ಚೋರಿ ಆಗಿದೆ ಅಂತ ಆರೋಪ ಮಾಡಿದ್ದರು. ಬಿ.ಆರ್ ಪಾಟೀಲ್ ಆಯ್ಕೆ ಮಾಡಿರುವ ಆಳಂದ ಕ್ಷೇತ್ರದ ಬಗ್ಗೆ ಮಾತಾಡಿದ್ದರು. ರಾಹುಲ್ ಗಾಂಧಿ ವೋಟ್‌ಚೋರಿ ಆಗಿ ನಮ್ಮವರು ಸೋತಿದ್ದಾರೆ. ಬೇರೆ ಯಾರೋ ಗೆದ್ದಿದ್ದಾರೆ ಅಂತ ಕ್ಷೇತ್ರ ಪಾಯಿಂಟ್ ಮಾಡಿ ಹೇಳ್ತಿಲ್ಲ. ರಾಹುಲ್ ಗಾಂಧಿ ಏನ್ ಮಾಡ್ತಾ ಇದ್ದಾರೆ ಎಂದು ಪ್ರಶ್ನೆ ಮಾಡಿದರು.

ಬಿಹಾರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಆರ್‌ಜೆಡಿ ಜೊತೆ ಕೈ ಜೋಡಿಸಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿ ತೀರಿಸೋಕೆ ರಾಹುಲ್ ಗಾಂಧಿ ಒಬ್ಬರೇ ಸಾಕು ಎಂದರು.

Comments (0)

Your email address will not be published. Required fields are marked *

Back to top button