ಬೆಂಗಳೂರು: ಸೆಲೆಬ್ರಿಟಿಗಳು ಕೆಲವೊಂದು ಬಾರಿ ಸಾಮಾನ್ಯರಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಸಾಧ್ಯವಾಗುದಿಲ್ಲ. ಹೀಗಾಗಿ ಮುಖ ಕಾಣದಂತೆ ಮಾಸ್ಕ್ ಧರಿಸಿ ಬರಬೇಕಾಗುತ್ತದೆ.. ಇದೇ ರೀತಿ ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೇಕಾಯಿ ಪರಿಷೆಯಲ್ಲಿ ಮಾಸ್ಕ್ ಧರಿಸಿ ಬಿಂದಾಸ್ ಆಗಿ ಸುತ್ತಾಡಿದ್ದಾರೆ.. ಪರಿಷೆಯಲ್ಲಿ ಸುತ್ತುವುದು ಒಂದು ಅದ್ಭುತ ಅನುಭವ ಎಂದು ಹೇಳಿ ಖುಷಿ ಪಟ್ಟಿದ್ದಾರೆ.
ಹಾಗೆಯೇ ಹೋದರೆ ಅಭಿಮಾನಿಗಳು ಗುರುತು ಹಿಡಿಯುತ್ತಾರೆ ಎನ್ನುವ ನಿಟ್ಟಿನಲ್ಲಿ ರಚಿತಾ ಅವರು ಮುಖಕ್ಕೆ ಮುಖವಾಡ ಹಾಕಿಕೊಂಡು ಪರಿಷೆಯಲ್ಲಿ ತಿರುಗಾಡಿದ್ದಾರೆ. ಯಾರಿಗೂ ಗುರುತು ಸಿಗದಂತೆ ಪರಿಷೆಯಲ್ಲಿ ರಚಿತಾ ಪಾಲ್ಗೊಂಡು ಖುಷಿಯಾಗಿದ್ದಾರೆ. 18 ವರ್ಷದ ಬಳಿಕ ಕಡಲೆಕಾಯಿ ಪರಿಷೆಯಲ್ಲಿ ಎಂದು ರಚಿತಾ ಬರೆದುಕೊಂಡಿದ್ದಾರೆ. ತುಂಬಾ ಮಜಾ ಮಾಡಿದ್ದೀನಿ. ಈ ರೀತಿ ಸುತ್ತಾಡುವುದರಲ್ಲಿರುವ ಖುಷಿಯೇ ಬೇರೆ ಎಂದು ರಚ್ಚು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


