ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರೇಮಿಗಳ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಎಲ್ಲೆಡೆ ಭಾರಿ ಸಂಚಲನ ಸೃಷ್ಟಿಸಿದೆ. “ಏನ್ ಗೊತ್ತಾ.. ಐ ಲವ್ ಯೂ ಅಷ್ಟೇ!” ಎಂದು ರಚಿತಾ ಪ್ರಪೋಸ್ ಮಾಡಿರುವ ವಿಡಿಯೋ ಕಂಡು ಅವರ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಸದಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಚ್ಚು, ಈ ವಿಶೇಷ ದಿನದಂದು ಯಾರಿಗೆ ಪ್ರೀತಿಯ ಸಂದೇಶ ರವಾನಿಸಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.


ಇತ್ತೀಚಿನ ದಿನಗಳಲ್ಲಿ ರಚಿತಾ ರಾಮ್ ಅವರ ಮದುವೆಯ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸ್ವತಃ ರಚಿತಾ ಅವರೇ “ಮನೆಯಲ್ಲಿ ಹುಡುಗನನ್ನು ನೋಡುತ್ತಿದ್ದಾರೆ, ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುತ್ತೇನೆ” ಎಂದು ಹೇಳುತ್ತಲೇ ಬಂದಿದ್ದರು. ಹೀಗಿರುವಾಗ ಪ್ರೇಮಿಗಳ ದಿನದಂದೇ ಅವರು ಈ ರೀತಿ ಬಹಿರಂಗವಾಗಿ ಪ್ರೀತಿ ನಿವೇದನೆ ಮಾಡಿರುವುದು, ಅವರ ಮದುವೆ ಫಿಕ್ಸ್ ಆಗಿದೆಯೇ ಅಥವಾ ಅವರು ಯಾರೊಂದಿಗಾದರೂ ಪ್ರೀತಿಯಲ್ಲಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಚಿತಾ ಅವರ ಈ ವಿಡಿಯೋ ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. “ಯಾರು ಆ ಅದೃಷ್ಟವಂತ?”, “ಮದುವೆ ಫಿಕ್ಸ್ ಆಯ್ತಾ ಮೇಡಂ?” ಎಂದು ಫ್ಯಾನ್ಸ್ ಕಾತರದಿಂದ ಕೇಳುತ್ತಿದ್ದಾರೆ. ಸದ್ಯಕ್ಕೆ ರಚಿತಾ ರಾಮ್ ಅವರ ಈ ‘ಐ ಲವ್ ಯೂ’ ರಹಸ್ಯ ಸ್ಯಾಂಡಲ್‌ವುಡ್‌ನ ಹಾಟ್ ಟಾಪಿಕ್ ಆಗಿ ಪರಿಣಮಿಸಿದೆ.


