ಗವರ್ನರ್ ಪ್ರಾಸಿಕ್ಯೂಷನ್ ಅನುಮತಿ ವಿಚಾರದಲ್ಲಿ ಮೈಲೇಜ್ ತೆಗೆದುಕೊಳ್ಳಲು ಹೋಗಿ ಆರ್.ಅಶೋಕ್ ಮಕ್ಕರ್ ಆದ ಘಟನೆಗೆ ಎಡವಟ್ಟು ಸಲಹೆಯೇ ಕಾರಣ ಅನ್ನೋ ವಿಚಾರ ಬಹಿರಂಗವಾಗಿದೆ.
ಪಾದಯಾತ್ರೆ ಮೈಲೇಜ್ ತಗೋಳೋಕೆ ಹೋಗಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಅಕ್ಷರಶಃ ಮುಗ್ಗರಿಸಿದ್ರು. ಪಾದಯಾತ್ರೆಯಿಂದಲೇ ಸಿಎಂ ವಿರುದ್ಧ ಗವರ್ನರ್ ಅನುಮತಿ ಅಂತಾ ಅಶೋಕ್ ಹೇಳಿದ್ರು. ಸಿಎಂ ವಿರುದ್ಧ ತನಿಖೆಗೆ ಆದೇಶ ಆಗಿರುವುದು ಪಾದಯಾತ್ರೆಗೆ ಸಿಕ್ಕ ಯಶಸ್ಸು ಹೀಗೆಂದು ಮಾಧ್ಯಮಗಳಿಗೆ ಹೇಳಿಕೆ ಕಳಿಸಿ ಮೈಲೇಜ್ ಪಡೆಯಲು ಮುಂದಾಗಿದ್ರು. ಆದರೆ, ಆರ್.ಅಶೋಕ್ ಹೇಳಿಕೆಗೆ ಕರ್ನಾಟಕದ ಚತುರ ಎಚ್ಡಿ ಕುಮಾರಸ್ವಾಮಿ ತಪರಾಕಿ ಕೊಟ್ಟಿದ್ರು. ಪಾದಯಾತ್ರೆಗೂ ಗವರ್ನರ್ ಅನುಮತಿಗೂ ಸಂಬಂಧ ಇಲ್ಲ ಎಂದಿದ್ದ ಎಚ್.ಡಿಕೆ, ನಮ್ಮ ಪಾದಯಾತ್ರೆಗೂ ಗವರ್ನರ್ ಸ್ಯಾಂಕ್ಷನ್ ಗೂ ಸಂಬಂಧ ಇಲ್ಲ ಅಂತಾ ಸ್ಪಷ್ಟ ವಾಕ್ಯಗಳಲ್ಲಿ ಹೇಳಿಕೆ ಕೊಟ್ಟು ಅಶೋಕ್ ಗೆ ಚಾಟಿ ಬೀಸಿದ್ರು. ಈ ಮೂಲಕ ಆರ್ ಅಶೋಕ್ ಮೈಲೇಜ್ ಆಟಕ್ಕೆ ಎಚ್ಡಿಕೆ ಬ್ರೇಕ್ ಹಾಕಿದ್ರು.
ತುಕಾಲಿ ಸಲಹೆಗೆ ಮಕ್ಕರ್: ಇನ್ನು ಆರ್ ಅಶೋಕ್ ಮಕ್ಕರ್ ಆಗಲು ತುಕಾಲಿ ಸಲಹೆ ಕಾರಣ ಎನ್ನಲಾಗ್ತಿದೆ.
ಸಲಹೆಗಾರನೊಬ್ಬ ಅಸಂಬದ್ದ ಹೇಳಿಕೆ ಕೊಡಿಸಿದ್ದರಿಂದಲೇ ಅಶೋಕ್ ಗೆ ಮುಜುಗರವಾಯಿತು. ಮೂಲತಃ ಬೆಂಗಳೂರಿನ ಅಶೋಕ್ ಸುಳ್ಳು ಹೇಳುವ ಸ್ವಭಾವದವರಲ್ಲ. ಅನಗತ್ಯ ಮೈಲೇಜ್ ತೆಗೆದುಕೊಳ್ಳುವ ಜಾಯಮಾನ ಅಶೋಕ್ ಅವ್ರದ್ದಲ್ಲ. ಆದರೆ ಹಸುವಿನ ಗೊಂತಿನಲ್ಲಿ ಮಲಗುವ ಶ್ವಾನದ ತಳಿಯವನೆನ್ನಲಾದ ಅಡ್ವೈಸರ್ ಅಶೋಕ್ ಬಾಯಿಂದ ಸುಳ್ಳು ಹೇಳಿಸಿದ್ದ.ಹೀಗೆ ಹೇಳಿಕೆ ಕೊಟ್ಟರೆ ಪೊಲಿಟಿಕಲ್ ಮೈಲೇಜ್ ಸಿಗುತ್ತೆ ಎಂದಿದ್ದ.ಇಂಥ ಅಡ್ನಾಡಿ ಸಲಹೆ ಯಿಂದ ಅಶೋಕ್ ಗೆ ಮುಜುಗರವಾಗಿದೆ ಎನ್ನಲಾಗ್ತಿದೆ.
ಅಸಲಿಗೆ ಈ ಅಡ್ವೈಸರ್ ವೃತ್ತಿ ಜೀವನದ ಆರಂಭದಿಂದಲೂ ಸಿದ್ದರಾಮಯ್ಯ ಚೇಲಾ ಆಗಿದ್ದು,
ಸಿದ್ಧರಾಮಯ್ಯನವರಿಗೆ ವಿರೋಧಿಗಳ ಕುರಿತು ಮಾಹಿತಿ ನೀಡುವ ಆಸಾಮಿಯಾಗಿದ್ದಾನೆ ಬೇಕೆಂದೇ ಆರ್ ಅಶೋಕ್ ದಾರಿ ತಪ್ಪಿಸಿದ್ದಾನೆ ಎಂದು ಅಶೋಕ್ ಆಪ್ತರೇ ಹೇಳಿಕೊಳ್ತಿದ್ದಾರೆ.


