ಕೊಪ್ಪಳ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಆಡಳಿತ ಚುರುಕಾಗಿದೆ. ಸರ್ಕಾರಿ ಜಾಹಿರಾತಿನ ಬ್ಯಾನರ್ಗಳ ತೆರವು ಶುರು ಮಾಡಿದೆ. ಕೊಪ್ಪಳ ಜಿಲ್ಲಾಧಿಕಾರಿ ಆವರಣ ಸೇರಿ ಹಲವೆಡೆ ಅಳವಡಿಸಿದ್ದ ಬ್ಯಾನರ್ ತೆರವು ಮಾಡಲಾಗಿದೆ.
ನಗರಸಭೆ ಸಿಬ್ಬಂಧಿ ಜಾಹಿರಾತು ಬೋರ್ಡ ತೆರವು ಕಾರ್ಯದಲ್ಲಿ ನಿರತವಾಗಿದ್ದಾರೆ ಸಿಎಂ. ಡಿ.ಸಿಂ ಹಾಗೂ ಇಲಾಖೆಯ ಸಚಿವರುಗಳ ಫೋಟೋ ಇದ್ದ ಬ್ಯಾನರ್ಗಳ ತೆರವು ಮಾಡುತ್ತಿದೆ. ಇದರೊಂದಿಗೆ ಸರ್ಕಾರದಿಂದ ಜನಪ್ರತಿನಿಧಿಗಳಿಗೆ ನೀಡಲಾಗಿದ್ದ ಸರ್ಕಾರಿ ವಾಹನಗಳನ್ನು ಜಿಲ್ಲಾಡಳಿತ ಅಧಿಕಾರಿಗಳು ವಾಪಸ್ ಪಡೆದಿದ್ದಾರೆ. ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೇರಿ ಹಲವರ ವಾಹನ ವಾಪಸ್ ಪಡೆಯಲಾಗಿದೆ