ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ, ನಟ ಯಶ್ ತಾಯಿ ಪುಪ್ಪ ಅವರು ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿನಿಮಾದ ಪಿಆರ್ಓ ಹರೀಶ್ ಅರಸು ಸೇರಿ ಐವರ ವಿರುದ್ಧ ಹೈಗ್ರೌಂಡ್ ಒಇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ..
ಸಿನಿಮಾ ಪ್ರಮೋಟ್ ಮಾಡಲು ಹಣ ಪಡೆದು ಡಿ ಪ್ರಮೋಟ್ ಮಾಡಿದ ಆರೋಪವನ್ನು ಪುಷ್ಪಾ ಅವರು ಮಾಡಿದ್ದು, ಕೊತ್ತಲವಾಡಿ ಸಿನಿಮಾ ಪ್ರಮೋಟ್ ಮಾಡಲು ಹಣ ಪಡೆದು ಡಿಪ್ರಮೋಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ವರ್ಣಗೌರಿ ಹಾಗೂ ಪಿಆರ್‌ಒ ಹರೀಶ್ ಸೇರಿ ನಾಲ್ಕು ಮಂದಿಯ ವಿರುದ್ಧ ದೂರು ನೀಡಲಾಗಿದೆ. ಕಳೆದ ಒಂದು ವಾರದ ಹಿಂದೆ ಕೊಟ್ಟಿರುವ ದೂರು ತಡವಾಗಿ ಬೆಳಕಿಗೆ ಬಂದಿದೆ. ಕೊತ್ತಲವಾಡಿ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಿ ಕೊಟ್ಟ ಹಣ ಸರಿಯಾಗಿ ಉಪಯೋಗ ಪಡಿಸಿಕೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟು 64 ಲಕ್ಷ ಹಣ ಪಡೆದು ಸಿನಿಮಾ ಪ್ರಚಾರ ಮಾಡಲಿಲ್ಲ. ಅಲ್ಲದೆ ಚಿತ್ರವನ್ನು ಇವರೇ ಡಿ ಪ್ರಮೋಟ್ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಅಷ್ಟೇ ಅಲ್ಲದೇ ಇನ್ನು ಹಣಕ್ಕೆ ಬೇಡಿಕೆ ಇಟ್ಟ ಆರೋಪವೂ ಇದೆ. ಹಣ ಕೊಡದೆ ಇದ್ದಲ್ಲಿ ಮನೆ ಬಳಿ ಬಂದು ಗಲಾಟೆ ಮಾಡೋದಾಗಿ ಬೆದರಿಕೆ ಹಾಕಿದ್ದಾಗಿ ಆರೋಪ ಮಾಡಿದ್ದಾರೆ. ಇತ್ತೀಚಿಗೆ ಬೆದರಿಕೆ ಕರೆಗಳು ಬರುತ್ತಿರೋದಾಗಿಯೂ ದೂರಿನಲ್ಲಿ ಉಲ್ಲೇಖ ಮಾಡಲಾಗಿದ್ದು ಸದ್ಯ ಯಶ್ ಅಮ್ಮನ ದೂರಿನಂತೆ ಪ್ರಕರಣ ದಾಖಲಿಸಿ ಪೊಲೀಸರು ಆರೋಪಿಗಳಿಗೆ ನೋಟಿಸ್ ಕೊಟ್ಟಿದ್ದಾರೆ.


