ಹೊಸದಿಲ್ಲಿ: ಪ್ರತಿಪಕ್ಷಗಳ ತೀವ್ರ ಅಪಸ್ವರದ ನಡುವೆಯೂ ಲೋಕಸಭೆಯಲ್ಲಿಮಂಡಿಸಲಾದ ‘ಒಂದು ದೇಶ, ಒಂದು ಚುನಾವಣೆ’ ವಿಧೇಯಕದ ಪರಾಮರ್ಶೆಗೆ ಬಿಜೆಪಿ ಸಂಸದ ಪಿ.ಪಿ. ಚೌಧರಿ ನೇತೃತ್ವದಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಿದೆ.

ಕಾಂಗ್ರೆಸ್‌ನ ಪ್ರಿಯಾಂಕಾ ವಾದ್ರಾ, ಮನೀಶ್‌ ತಿವಾರಿ, ಸುಖ್‌ದೇವ್‌ ಭಗತ್‌, ಟಿಎಂಸಿಯ ಕಲ್ಯಾಣ್‌ ಬ್ಯಾನರ್ಜಿ, ಎನ್‌ಸಿಪಿಯ (ಎಸ್‌ಪಿ ಬಣ) ಸುಪ್ರಿಯಾ ಸುಳೆ, ಮಹಾರಾಷ್ಟ್ರ ಡಿಸಿಎಂ ಏಕನಾಥ್‌ ಶಿಂಧೆ ಬಣದ ಶಿವಸೇನೆಯ ಶ್ರೀಕಾಂತ್‌ ಶಿಂಧೆ, ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ಪುರಿ ಸಂಸದ ಸಂಬಿತ್‌ ಪಾತ್ರ ಸೇರಿದಂತೆ 21 ಲೋಕಸಭೆ ಸಂಸದರು ಹಾಗೂ 10 ರಾಜ್ಯಸಭೆ ಸದಸ್ಯರನ್ನು ಜೆಪಿಸಿಗೆ ನೇಮಿಸಲಾಗಿದೆ

ಮಂಗಳವಾರವಷ್ಟೇ ಲೋಕಸಭೆಯಲ್ಲಿಕಾನೂನು ಸಚಿವ ಅರ್ಜುನ್‌ ಮೇಘವಾಲ್‌ ಅವರು ‘ಒಂದು ದೇಶ, ಒಂದು ಚುನಾವಣೆ’ ವಿಧೇಯಕವನ್ನು ಮಂಡಿಸಿದ್ದರು. ಈ ಬಿಲ್‌ ಮಂಡಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮತದಾನವೂ ನಡೆದಿತ್ತು. 269 ಮತಗಳು ಪರವಾಗಿ ಮತ್ತು 198 ಮತಗಳು ವಿರುದ್ಧವಾಗಿ ಚಲಾವಣೆಯಾಗಿದ್ದವು.

 

Leave a Reply

Your email address will not be published. Required fields are marked *

Verified by MonsterInsights