ರಾಜ್ಯಸಭೆ ಚುನಾವಣೆ ನಂತರ ಹಿಮಾಚಲ ಪ್ರದೇಶದಲ್ಲಿ (himachal Pradesh)ತಲೆದೂರಿದ ರಾಜಕೀಯ ಬಿಕ್ಕಟ್ಟಿನಿಂದ ಕಾಂಗ್ರೆಸ್ ಸರ್ಕಾರ ಪತನವಾಗುವ ಲಕ್ಷಣಗಳು ಗೋಚರಿಸಿದ್ದವು. ಅವಿಶ್ವಾಸ ಅಸ್ತ್ರ ಝಳಪಿಸುವ ಜೊತೆಗೆ ಆಪರೇಷನ್ ಕಮಲ (operation lotus)ನಡೆಸಲು ಬಿಜೆಪಿ ಪ್ರಯತ್ನ ಶುರು ಮಾಡಿತ್ತು.

ಆದರೆ, ಬಿಜೆಪಿಯ ಕೆಟ್ಟ ರಾಜಕೀಯಕ್ಕೆ ಪ್ರಿಯಾಂಕಾ ಗಾಂಧಿ (priyanka gandhi) ಬ್ರೇಕ್ ಹಾಕಿದ್ದಾರೆ. ಆಪರೇಷನ್ ಕಮಲವನ್ನು ತಡೆಯುವ ಮೂಲಕ ಪ್ರಜಾ ತೀರ್ಪನ್ನು ರಕ್ಷಿಸುವಲ್ಲಿ ಪ್ರಿಯಾಂಕಾ ಗಾಂಧಿ ಮಹತ್ವದ ಪಾತ್ರ ವಹಿಸಿದ್ದಾರೆ.

ಹಿಮಾಚಲ ಪ್ರದೇಶ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಷಡ್ಯಂತ್ರ್ಯ ರೂಪಿಸಿತ್ತು..ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿತ್ತು. ಆದರೆ, ಸದ್ಯ ಹಿಮಾಚಲ ರಾಜಕೀಯ ಪರಿಸ್ಥಿತಿ ನಿಯಂತ್ರಣದಲ್ಲಿಯೇ ಇದೆ ಎಂದು ಕಾಂಗ್ರೆಸ್ ತಿಳಿಸಿದೆ.

ಆಪರೇಷನ್ ಕಮಲ  ತಡೆಯಲು ಪ್ರಿಯಾಂಕಾ ಗಾಂಧಿ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೂಡಿ ರೂಪಿಸಿದ ತಂತ್ರ ಸಫಲವಾಗಿದೆ.

ಅಡ್ಡಮತದಾನ ಮಾಡಿದ ಆರು ಶಾಸಕರನ್ನು ಅನರ್ಹ ಆಗುವಂತೆ ನೋಡಿಕೊಳ್ಳುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೇ ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್ ಪಕ್ಷ ರವಾನಿಸಿದೆ.

ಆಪರೇಷನ್ ಕಮಲ ತಡೆಯುವಲ್ಲಿ ಸಫಲವಾದ ಕಾರಣ ಸುಖ್ವಿಂದರ್ ಸಿಂಗ್ ಸುಕ್ಕು ಇಮೇಜ್ ಕೂಡ ವೃದ್ಧಿಯಾಗಿದೆ ಎಂದು ಹೇಳಲಾಗುತ್ತಿದೆ.

By admin

Leave a Reply

Your email address will not be published. Required fields are marked *

Verified by MonsterInsights