ಬೆಂಗಳೂರು: ರಾಜ್ಯದ ಜನರಿಗೆ ಕಳೆದ ಕೆಲವು ತಿಂಗಳಿಂದ ದರ ಏರಿಕೆ ಬಿಸಿ ತಟ್ಟುತ್ತಲೇ ಇದೆ. ಅತ್ತ ಮೆಟ್ರೋ ಪ್ರಯಾಣ ದರ, ಬಸ್ ಪ್ರಯಾಣ ದರ ಹೀಗೆ ದರ ಏರಿಕೆ ಘೋಷಣೆ ಮಾಡಿ ಸರ್ಕಾರ ಗಾಯದ ಮೇಲೆ ಬರೆ ಎರೆಯುತ್ತಲೇ ಇದೆ. ಹಲವು ಚರ್ಚೆ, ಬೇಡಿಕೆಗಳ ನಡುವೆ ಕೊನೆಗೂ ಸರ್ಕಾರ ಹಾಲು ಮತ್ತು ವಿದ್ಯುತ್ ದರವನ್ನು ಏರಿಕೆ ಮಾಡಿತ್ತು.ಇದೀಗ ಈ ಮಧ್ಯೆ ಮತ್ತೆ ಸಿಟಿ ಜನರಿಗೆ ಮತ್ತೊಂದು ದರ ಏರಿಕೆ ಬಿಸಿ ತಟ್ಟಲಿದೆ. ಹಾಲು, ಟೀ, ಕಾಫಿ ನಂತ್ರ ಇದೀಗ ಹೋಟೆಲ್‌ನಲ್ಲಿ ಸಿಗುವ ತಿಂಡಿಗಳ ದರ ಹೆಚ್ಚಳ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಡ್ಲಿ, ದೋಸೆ, ತುಪ್ಪ, ಮಜ್ಜಿಗೆ ಸೇರಿದಂತೆ ಸಿಹಿ ತಿಂಡಿಗಳ ದರ ಏರಿಕೆ ಮಾಡುವುದಾಗಿ ವರದಿಯಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ 1 ರಿಂದ 2 ರೂಪಾಯಿ ಏರಿಕೆ ಆಗಲಿದೆ. ಈಗಾಗಲೇ ದರ ಅಂತಿಮ ಪಟ್ಟಿಯನ್ನು ಸಿದ್ದ ಪಡಿಸುತ್ತಿರುವ ಹೋಟೆಲ್ ಮಾಲೀಕರು ಇನ್ನೇನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಿದ್ದಾರೆ.


