ಪಾಟ್ನಾ: ಸಿಲಿಕಾನ್ ಸಿಟಿಯಲ್ಲಿ ಬಹುತೇಕ ರಸ್ತೆಗಳು ಹೊಂಡ ಗುಂಡಿ ಬಿದ್ದು ಹದಗೆಟ್ಟು ಹೋಗಿದ್ದು, ವಾಹನ ಚಾಲಯಿಸಲಾಗದೇ ಸವಾರರು ಸುಸ್ತಾಗಿ ಬಿಟ್ಟಿದ್ದಾರೆ.. ಇದೇ ವಿಚಾರಕ್ಕೆ ಸರ್ಕಾರದ ಗಮನಸೆಳೆಯಲು ಇಂದು ಬಿಜೆಪಿ ಪಕ್ಷ ನಾಯಕರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.. ರಸ್ತೆಗುಂಡಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಬೆಂಗಳೂರಿನ ಹದಗೆಟ್ಟ ರಸ್ತೆಗುಂಡಿಗಳಿಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ದೂಷಿಸಿದ್ದಾರೆ.
ಪಾಟ್ನಾದಲ್ಲಿ ಮಾತನಾಡಿದ ಅವರು, ಬಿಜೆಪಿ ಎಂದಿಗೂ ಸಂತೋಷವಾಗಿಲ್ಲ. ಈ ಎಲ್ಲಾ ಗುಂಡಿಗಳಿಗೂ ಬಿಜೆಪಿ ಆಡಳಿತವೇ ಕಾರಣ. ಕರ್ನಾಟಕದ ಕೆಟ್ಟ ರಸ್ತೆಗಳಿಗೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಉಪಮುಖ್ಯಮಂತ್ರಿ ಪಾಟ್ನಾದಲ್ಲಿದ್ದಾರೆ. ದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕೆ ಹೋಗುವ ರಸ್ತೆಯಲ್ಲೂ ಗುಂಡಿಗಳಿವೆ ಎಂದು ಹೇಳಿದ್ದಾರೆ..


