ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರದ ನಡುವೆ ಇಂದು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ..
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಇಂದು ಡಿಕೆ ಶಿವಕುಮಾರ್ ಅವರು ನಮ್ಮ ಮನೆಗೆ ಬಂದಿದ್ದರು. ಇಬ್ಬರೂ ಒಟ್ಟಿಗೆ ಬ್ರೇಕ್‌ಫಾಸ್ಟ್ ಮಾಡಿದ್ವೆ. ಕಾಂಗ್ರೆಸ್ ಜನರಲ್ ಸೆಕ್ರಟರಿ ವೇಣುಗೋಪಾಲ್ ಅವರು ಮೊನ್ನೆಯೇ ಕರೆ ಮಾಡಿದ್ದರು. ಡಿಕೆಶಿಗೂ ಕರೆ ಮಾಡಿ, ನಾನು ಅವರ ಮನೆಗೆ ಹೋಗಿ ಮಾತನಾಡಿ ಎಂದು ಹೇಳಿದ್ದರು. ಅದರಂತೆ ನಾನು ಕರೆದು, ನಮ್ಮ ಮನೆಗೆ ಬ್ರೇಕ್‌ಫಾಸ್ಟ್‌ಗೆ ಬನ್ನಿ ಅಂತ ಹೇಳಿದ್ದೆ. ಇನ್ನೊಂದು ದಿನ ನಿಮ್ಮ ಮನೆಗೆ ಊಟಕ್ಕೆ ಬರ್ತೀನಿ ಅಂತಾ ಹೇಳಿದ್ದೇನೆ, ಎಂದು ಹೇಳಿದರು.
ಡಿಕೆಶಿ ಅವರೂ ಒಂದೇ ಧ್ವನಿಯಲ್ಲಿ, ಈಗಲೂ ಗೊಂದಲ ಇಲ್ಲ, ನಾಳೆಯಿಂದಲೂ ಇರೋದಿಲ್ಲ. ಹೈಕಮಾಂಡ್‌ನ ನಿರ್ಧಾರಕ್ಕೆ ನಾವು ಬೆಂಬಲ ನೀಡುತ್ತೇವೆ, ಎಂದು ಹೇಳಿದರು. ಹೈಕಮಾಂಡ್‌ನ ಸೂಚನೆಯಂತೆ ಇಬ್ಬರೂ ನಾಯಕರು ಒಗ್ಗಟ್ಟಿನ ಸಂದೇಶ ನೀಡಿದ್ದು, ಹೈಕಮಾಂಡ್ ಏನೇ ಹೇಳಿದರೂ ಕೇಳ್ತೀವಿ. ಗೊಂದಲ ಬಗೆಹರಿಸಿಕೊಳ್ಳಿ ಅಂತ ಹೇಳಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರೋದಿಲ್ಲ, ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಶುರುವಾಗಲಿದೆ. ಸುಳ್ಳು ಅಪವಾದ ಮಾಡೋದು ಬಿಜೆಪಿ-ಜೆಡಿಎಸ್ ಚಾಳಿ. ಇದನ್ನ ಬಹಳ ಸಮರ್ಥವಾಗಿ ನಾವು ಮತ್ತು ನಮ್ಮ ಸರ್ಕಾರ ಸಮರ್ಥವಾಗಿ ಎದುರಿಸುತ್ತೇವೆ. ಅದಕ್ಕೆ ಬೇಕಾದ ತಂತ್ರಗಳನ್ನೂ ರೂಪಿಸಿದ್ದೇವೆ ಎಂದು ತಿಳಿಸಿದರು.


