ಬೆಂಗಳೂರು: ಸಿಎಂ ಪರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆದಿದೆ. ರವಿಚಂದ್ರ ಮೃತಪಟ್ಟ ವ್ಯಕ್ತಿ.
ಕುರುಬ ಸಮುದಾಯದಿಂದ ಸುದ್ದಿಗೋಷ್ಠಿ ವೇಳೆ ಈ ಅನಾಹುತ ಸಂಭವಿಸಿದೆ. ಮೃತ ವ್ಯಕ್ತಿಯೂ ಕೋಲಾರದ ಕುರುಬ ಸಂಘದ ಅಧ್ಯಕ್ಷರಾಗಿದ್ದರು. ಇಂದು ನಡೆಯುತ್ತಿದ್ದ ಪ್ರೆಸ್ ಕ್ಲಬ್ನಲ್ಲಿ ಈ ಘಟನೆ ಸಂಭವಿಸಿದೆ. ಆ ಕೂಡಲೇ ಹೃದಯಾಘಾತಕ್ಕೀಡಾದ ರವಿಚಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ರವಿಚಂದ್ರ ಮೃತಪಟ್ಟಿದ್ದಾರೆ.