Top News
ದರ್ಶನ್ ಅರೆಸ್ಟ್ ಮಾಡಿದ್ದ ಎಸಿಪಿ ಚಂದನ್ಗೆ ಪ್ರತಾಪ್ ಸಿಂಹ ಸವಾಲು


ಇತ್ತೀಚಿಗೆ ಯಶವಂತಪುರ ರೈಲ್ವೆ ಸ್ಟೇಷನ್ನಲ್ಲಿ ರಾಜಸ್ಥಾನದಿಂದ ಬಂದಿದ್ದ ಮಾಂಸವನ್ನು ನಾಯಿ ಮಾಂಸ ಎಂದು ಆರೋಪ ಮಾಡಿದ್ದ ಹಿಂದೂ ಪರ ಸಂಘಟನೆಯ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ಬಂಧಿಸಿದ್ದರು, ನಿನ್ನೆ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ, ಆದರೆ ಈಗ ಪೊಲೀಸರು ಪುನೀತ್ ಕೆರೆ ಹಳ್ಳಿಯವರನ್ನು ಬೆತ್ತಲೆ ಮಾಡಿ ಅಪಮಾನಿಸಿ ಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ, ಈ ವಿಚಾರಕ್ಕೆ ಈಗ ಮಾಜಿ ಸಂಸದ ಪ್ರತಾಪ್ ಸಿಂಹ ಎಂಟ್ರಿ ಕೊಟ್ಟಿದ್ದು “ಸಹೋದರ ಪುನೀತ್ಕೆರೆಹಳ್ಳಿ ಬಿಡುಗಡೆಯಾಗಿದ್ದಾರೆ ಆದರೆ ಪೊಲೀಸ್ ಠಾಣೆಯಲ್ಲಿ ಅವರಿನ್ನು ಬೆತ್ತಲೆ ಮಾಡಿ ಹಿಂಸೆ ಕೊಟ್ಟಿದ್ದಾರೆ ಎಂದು ಪೋಸ್ಟ್ ಮಾಡಿದ್ದಲ್ಲದೆ ನಾನು ಪೊಲೀಸ್ ಸ್ಟೇಷನ್ ಗೆ ಬರುತ್ತೇನೆ ಆ ಸಮಯದಲ್ಲಿ ನೀವು ಇರಬೇಕು” ಎಂದು ಎಸಿಪಿ ಚಂದನ್ ಅವರಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ .




