ಬೆಂಗಳೂರು; ಅತ್ಯಾಚಾರ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೇರಿ 7 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ. 42ನೇ ACMM ಕೋರ್ಟ್ನಲ್ಲಿ ದೋಷಾರೋಪ ಪಟ್ಟಿ ಕೆ.ಆರ್.ನಗರ ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಹೆಚ್.ಡಿ.ರೇವಣ್ಣ ಸೂಚನೆ ಮೇರೆಗೆ ಸಂತ್ರಸ್ತೆ ಅಪಹರಣ ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಭವಾನಿ ರೇವಣ್ಣ ಪಾತ್ರದ ಬಗ್ಗೆಯೂ ಪಟ್ಟಿಯಲ್ಲಿ ಉಲ್ಲೇಖ ವಾಗಿದ್ದು, ಈ ವೇಳೆ ರೇವಣ್ಣ ಪರ ಹಾಗೂ ಸರ್ಕಾರಿ ವಕೀಲರ ನಡುವೆ ವಾದ – ಪ್ರತಿವಾದಗಳು ನಡೆದಿವೆ. ಇಂಥ ಕಾರಣಗಳಿಗೆ ಜಾಮೀನು ಕೊಡಲೇ ಬೇಕು ಎಂದು ರೇವಣ್ಣ ಪರ ವಕೀಲರಾದ ನಾಗೇಶ್ ವಾದ ಮಂಡಿಸಿದರು.