Saturday, August 30, 2025
20.5 C
Bengaluru
Google search engine
LIVE
ಮನೆಸಿನಿಮಾಪ್ರಭಾಸ್ ನಟನೆಯ ಕಲ್ಕಿ: ಜೂನ್ 10ಕ್ಕೆ ಟ್ರೈಲರ್ ರಿಲೀಸ್

ಪ್ರಭಾಸ್ ನಟನೆಯ ಕಲ್ಕಿ: ಜೂನ್ 10ಕ್ಕೆ ಟ್ರೈಲರ್ ರಿಲೀಸ್

ಬುಜ್ಜಿ ಅಂಡ್ ಭೈರವ ಸಿರೀಸ್ ಮೂಲಕ ಗಮನ ಸೆಳೆದ ಕಲ್ಕಿ 2898 AD ಸಿನಿಮಾ ಇದೀಗ ಟ್ರೇಲರ್ ಆಗಮನದ ಸುದ್ದಿ ನೀಡಿದೆ. ಈಗಾಗಲೇ ಸಿನಿಮಾಪ್ರೇಮಿಗಳ ಗಮನ ಸೆಳೆದ ಈ ಸಿನಿಮಾ, ಒಂದಾದ ಮೇಲೊಂದು ಅಪ್‌ಡೇಟ್‌ ನೀಡುತ್ತ ನೋಡುಗನನ್ನು ಸೆಳೆಯುತ್ತಿದೆ. ಇದೀಗ ಟ್ರೈಲರ್ ಕಣ್ತುಂಬಿಕೊಳ್ಳಲು ದಿನಾಂಕ ನಿಗದಿ ಮಾಡಿದೆ ಚಿತ್ರತಂಡ.

ಕೇವಲ ತೆಲುಗು ಪ್ರೇಕ್ಷಕರು ಮಾತ್ರವಲ್ಲದೆ, ಇಡೀ ದೇಶ, ಪ್ರಭಾಸ್‌ ನಟನೆಯ ಕಲ್ಕಿ 2898 AD ಸಿನಿಮಾಕ್ಕಾಗಿ ಕಾಯುತ್ತಿದೆ. ಒಂದಾದ ನಂತರ ಬಂದು ವಿಶೇಷತೆಗಳನ್ನು ಈ ಸಿನಿಮಾ ಪ್ರೇಕ್ಷಕರ ಮಡಿಲಿಗೆ ಕಾಯುತ್ತಲೇ ಬಂದಿರುವ ಕಲ್ಕಿ ಸಿನಿಮಾ ತಾರಾಗಣದ ವಿಚಾರದಲ್ಲೂ ಕುತೂಹಲ ಮೂಡಿಸಿದೆ. ಅದರಂತೆ  ಟ್ರೈಲರ್ ಮೂಲಕ ಮತ್ತಷ್ಟು ರೋಚಕತೆ ಉಕ್ಕಿಸಲು ಚಿತ್ರತಂಡ ಸಜ್ಜಾಗಿದೆ. ಜೂನ್‌ 10ರಂದು ಬಹುಭಾಷೆಗಳಲ್ಲಿ ಕಲ್ಕಿ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ.

ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ಕಲ್ಕಿ 2898 AD ಸಿನಿಮಾದ ಟ್ರೇಲರ್‌ ಜೂನ್ 10ರಂದು ನೋಡುಗರ ಎದುರು ತರಲು ನಿರ್ಮಾಣ ಸಂಸ್ಥೆ ಸಿದ್ಧವಾಗಿದೆ. ಈಗಾಗಲೇ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಿರುವ ಬಿ&ಬಿ ಬುಜ್ಜಿ ಮತ್ತು ಭೈರವ ಸಿರೀಸ್‌ ಮೂಲಕ ಇನ್ನಷ್ಟು ಕ್ಯೂರಿಯಾಸಿಟಿ ಮೂಡಿಸಿದ ನಿರ್ದೇಶಕ ನಾಗ್ ಅಶ್ವಿನ್‌, ಇದೀಗ ಟ್ರೇಲರ್‌ನಲ್ಲೇನಿರಲಿದೆ ಎಂಬುದನ್ನು ತೋರಿಸಲು ಆಗಮಿಸುತ್ತಿದ್ದಾರೆ.
ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಹೊಸ ಪೋಸ್ಟರ್‌ನೊಂದಿಗೆ ಚಿತ್ರನಿರ್ಮಾಣ ಸಂಸ್ಥೆ ಘೋಷಿಸಿದೆ. ಪರ್ವತದ ಶಿಖರದ ಮೇಲೆ ನಿಂತ ಭಂಗಿಯಲ್ಲಿ ಭೈರವ ಸೂಪರ್‌ ಹೀರೋ ರೀತಿಯಲ್ಲಿ ಕಂಡಿದ್ದಾನ್.‌ ಅಂದಹಾಗೆ ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾಷೆಗಳಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com
Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments