Top Newsರಾಜ್ಯ

ಗಂಗಮತ ಸಂಘದ ಎಲೆಕ್ಷನ್ ಮುಂದೂಡಿ – ಸಮಾಜದ ಹಿತಚಿಂತಕರ ಒತ್ತಾಯ

ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಚುನಾವಣೆ ಜೂನ್ ಆರಕ್ಕೆ ನಿಗದಿ ಆಗಿದೆ. ಆದ್ರೆ ಗಂಭೀರ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ನಿಗದಿ ಮಾಡಲಾದ ಸಂಘದ ಚುನಾವಣೆಯನ್ನು ಮುಂದೂಡಿಕೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಗಂಗಾಮತ ಸಮುದಾಯದ ಹಿತಚಿಂತಕರು, ಸಂಘದ ಸದಸ್ಯರು ಒತ್ತಾಯ ಮಾಡಿದ್ದಾರೆ.

ಗಂಗಾಮತಸ್ಥರ ಸಂಘದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಆಡಳಿತಾಧಿಕಾರಿ ವಿದ್ಯಾರಾಣಿ ಅವರು ಪಾರದರ್ಶಕವಾದ ವರದಿ ನೀಡಿ, ಕ್ರಮಕ್ಕೆ ಶಿಫಾರಸು ಮಾಡಿದ್ದರೂ, ಸಹಕಾರ ಸಂಘಗಳ ಉಪನಿಬಂಧಕರಾದ ಸಲೀಂ ಅವರು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅಕ್ರಮ ಎಸಗಿರುವ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಸೇರಿ 19 ನಿರ್ದೇಶಕರನ್ನು ಅಮಾನತು ಮಾಡದಿರುವುದು ಮತ್ತು ದುರಪಯೋಗವಾದ ಹಣ 2.44 ಕೋಟಿ ಹಣವನ್ನು ವಸೂಲಿ ಮಾಡದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಸಲೀಂ ಅವರ ಕಾರ್ಯಚಟುವಟಿಕೆ ಮೇಲೆಯೂ ಅನುಮಾನ ಬರುವಂತೆ ಆಗಿದೆ.

ಗಂಗಮತ ಸಂಘದಲ್ಲಿ ನಡೆದಿರುವ ಭ್ರಷ್ಟಾಚಾರದಿಂದ ಹಿಂದುಳಿದ ಸಮುದಾಯದ 20 ಲಕ್ಷ ಮಂದಿಗೆ ಅನ್ಯಾಯ ಆಗ್ತಿದೆ. ಈ ವಿಚಾರವಾಗಿ ಸಹಕಾರ ಸಚಿವರಾದ ಕೆಎನ್ ರಾಜಣ್ಣ ಅವರು ಮಧ್ಯಪ್ರವೇಶ ಮಾಡಬೇಕು. ಪಾರದರ್ಶಕ ಚುನಾವಣೆಗಾಗಿ ಕ್ರಮ ತೆಗೆದುಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಗಂಗಮತ ಸಮಾಜದ ಹಿತಚಿಂತಕರಾದ ಗುಂಡು ಐನಾಪೂರ ಅವರು ಒತ್ತಾಯ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button