#Exclusive NewsTop News

ಉಪ್ಪಿ ‘ಯುಐ’ನಲ್ಲಿ ಪಡ್ಡೆಗಳ ಪಾಪ್‌ಕಾರ್ನ್ ಸನ್ನಿ ಲಿಯೋನ್ ಇರೋದ್ ಕನ್ಫರ್ಮ್, ಸಾಕ್ಷಿ ಬೇಕಾ ಇಲ್ಲಿದೆ.

ಉಪೇಂದ್ರ ನಿರ್ದೇಶನದ ಸಿನಿಮಾ ಅಂದ್ರೆ ಸಹಜವಾಗಿಯೇ ಭಾರತದ ತುಂಬೆಲ್ಲಾ ನಿರೀಕ್ಷೆಯ ಮಹಾಪೂರವೇ ಸೃಷ್ಟಿಯಾಗುತ್ತದೆ. ಈ ಬಾರಿ ಅದು ಜಾಗತಿಕ ನಿರೀಕ್ಷೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ, ಈ ಸಿನಿಮಾ ಪ್ಯಾನ್ ಇಂಡಿಯಾ ಎನ್ನುವುದು ಒಂದು..

ನಟ-ನಿರ್ದೇಶಕ ಉಪೇಂದ್ರ (Real Star Upendra) ಮುಂಬರುವ ಚಿತ್ರ ‘ಯು/ಐ’ ದಲ್ಲಿ ಜಗದ್ವಿಖ್ಯಾತ ನಟಿ ಸನ್ನಿ ಲಿಯೋನ್ (sunny Leone) ಇರುವುದು ಪಕ್ಕಾ ಆಗಿದೆ. ಹಾಟ್ ನಟಿ ಸನ್ನಿ ಲಿಯೋನ್ ಅವರು (U/I) ಚಿತ್ರದಲ್ಲಿ ಸಾಂಗ್‌ಗೆ ಮಾತ್ರ ಸೀಮಿತ ಆಗಿದ್ದಾರಾ ಅಥವಾ ಸಿನಿಮಾದಲ್ಲೂ ನಟಿಸಿದ್ದಾರಾ ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಆದರೆ, ಇಷ್ಟು ದಿನ, ಸಾಂಗ್ ಶೂಟ್ ಮಾಡಿದ್ದರೂ ಕೂಡ, ಸಿನಿಮಾದಲ್ಲಿ ಈ ಹಾಡು ಇರೊತ್ತೋ ಇಲ್ವೋ ಎನ್ನುವುದು ಕನ್ಫರ್ಮ್ ಆಗಿರಲಿಲ್ಲ. ಕಾರಣ, ಅದೆಷ್ಟೂ ಹಾಡುಗಳು ಶೂಟ್ಆಗಿದ್ದರೂ ಸಿನಿಮಾದಲ್ಲಿ ಮಾಯವಾಗಿರುತ್ತವೆ.

ಆದರೆ, ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ನಟನೆ-ನಿರ್ದೇಶನದ ‘U/I’ ಚಿತ್ರವು ಸದ್ಯದಲ್ಲೇ, ಅಂದರೆ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಉಪೇಂದ್ರ ಹೊರತುಪಡಿಸಿದರೆ ಯಾರೆಲ್ಲಾ ನಟಿಸಿದ್ದಾರೆ ಎಂಬುದು ಸಾಕಷ್ಟು ಸೀಕ್ರೆಟ್ ಆಗಿಯೇ ಉಳಿದಿತ್ತು. ಆದರೆ, ನಟಿ ಸನ್ನಿ ಲಿಯೋನ್ ಇರುವುದು ಈಗ ದೃಢವಾಗಿದೆ. ಆದರೆ, ಪಾತ್ರದಲ್ಲಿ ನಟಿಸಿ ಹಾಡಲ್ಲಿ ಇದ್ದಾರಾ ಅಥವಾ ಬರೀ ಹಾಡಲ್ಲಿ ಮಾತ್ರವೇ ಸನ್ನಿ ದರ್ಶನವೋ?! ಸದ್ಯಕ್ಕೆ ಹೇಳುವವರಿಲ್ಲ.

Comments (0)

Your email address will not be published. Required fields are marked *

Back to top button