ನವದೆಹಲಿ: ಪ್ರಧಾನ ಮಂತ್ರಿಯ ಅರ್ಥಿಕ ಸಲಹಾ ಮಂಡಳಿ ಮಾಜಿ ಸದಸ್ಯೆ ಪೂನಮ್ ಗುಪ್ತಾ ಅವರು ಮೂರು ವರ್ಷಗಳ ಅವಧಿಗೆ ಆರ್ಬಿಐ ಡೆಪ್ಯೂಟಿ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.
ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್‌ಗೆ ಸೇರುವ ಮೊದಲು, ಗುಪ್ತಾ ಅವರು ಅಂತರರಾಷ್ಟ್ರೀಯ ಹಣಕಾಸು ನಿಗಮದಲ್ಲಿ ಜಾಗತಿಕ ಮ್ಯಾಕ್ರೋ ಮತ್ತು ಮಾರುಕಟ್ಟೆ ಸಂಶೋಧನೆಯ ಪ್ರಮುಖ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದರು. ಈ ಹಿಂದೆ ಭಾರತೀಯ ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ಸಂಶೋಧನಾ ಮಂಡಳಿಯಲ್ಲಿ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದರು. ಅಲ್ಲದೇ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಸಂಶೋಧಕರೂ ಆಗಿದ್ದರು
ಪೂನಮ್ 16ನೇ ಹಣಕಾಸು ಆಯೋಗದ ಸಲಹಾ ಮಂಡಳಿಯ ಸದಸ್ಯರೂ ಹೌದು. ಇತ್ತೀಚಿಗೆ ಆರ್‌ಬಿಐನ ಡೆಪ್ಯೂಟಿ ಗವರ್ನರ್ ಹುದ್ದೆಯಿಂದ ನಿವೃತ್ತಿ ಹೊಂದಿದ ಎಂ.ಬಿ.ಪಾತ್ರಾ ಅವರ ಹುದ್ದೆಯನ್ನು ಪೂನಮ್ ಗುಪ್ತಾ ಅಲಕಂರಿಸಲಿದ್ದಾರೆ.