ಕ್ರೈಂ ಸ್ಟೋರಿಸುದ್ದಿ

ಅನಧಿಕೃತವಾಗಿ ಕಾಲ್ ಡಿಟೈಲ್ಸ್ ನ ಹಣಕ್ಕೆ ಮಾರ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಅಂದರ್

ನಾಗೇಶ್ವರ ರೆಡ್ಡಿ ಮುನಿರತ್ನ

 

ಬೆಂಗಳೂರು: ಸಿಸಿಬಿ ಹಾಗೂ ವಿಜಯನಗರ ಉಪವಿಭಾಗದ ಪೊಲೀಸರು ಕಾರ್ಯಾಚರಣೆಯಲ್ಲಿ ಬಯಲಾಗಿದ್ದ ಖಾಸಗಿ ಡಿಟೆಕ್ಟಿವ್‌ ಏಜೆನ್ಸಿಗಳ ಕಳ್ಳಾಟದಲ್ಲಿ ಸಿಸಿಬಿ ಪೊಲೀಸ್ರು ಸಿಐಡಿ ಪೊಲೀಸ್ ಸಿಬ್ಬಂದಿಯನ್ನ ಬಂಧಿಸಿದ್ದಾರೆ. ಕಳೆದ ಮೇ‌ ತಿಂಗಳಲ್ಲಿ ಮಹಾನಗರಿ ಡಿಟೆಕ್ಟಿವ್‌ & ಸೆಕ್ಯುರಿಟಿ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಹೆಸರಿನ ಕಚೇರಿಗಳಲ್ಲಿ ಪರಿಶೀಲನೆ ನಡೆಸಿ ಅನಧಿಕೃತವಾಗಿ ಸಿಡಿಆರ್ ಪಡೆಯುತ್ತಿದ್ದ ಆರೋಪ ಹಿನ್ನೆಲೆ ಮೂರು ಪ್ರಕರಣಗಳನ್ನ ದಾಖಲಿಸಿದ್ರು. ಆಸಮಯದಲ್ಲಿ ಪುರುಷೋತ್ತಮ, ಸತೀಶ್ ಕುಮಾರ್, ತಿಪ್ಪೇಸ್ವಾಮಿ, ಮಹಾಂತಗೌಡ, ರೇವಂತ, ಗುರುಪಾದಸ್ವಾಮಿ, ಶ್ರೀನಿವಾಸ ಮತ್ತು ಭರತ್ ಎಂಬುವವರನ್ನ ಬಂಧಿಸಲಾಗಿತ್ತು. ಸದ್ಯ ಈ ತಂಡದ ಕಿಂಗ್ ಪಿನ್ ಆಂಧ್ರ ದ ನಾಗೇಶ್ವರ ರೆಡ್ಡಿಗೆ ಎಂಬಾತನನ್ನ ಬಂಧಿಸಾಲಗಿದೆ. ಇನ್ನೂ ಈ ನಾಗೇಶ್ವರ ರೆಡ್ಡಿಗೆ ಸಿಡಿ ಆರ್ ನೀಡ್ತಿದ್ದ ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ ಎಂಬಾತನನ್ನ ಬಂಧಿಸಲಾಗಿದೆ. ಮುನಿರತ್ನ ಹಲವು ವರ್ಷಗಳಿಂದ ಸಿಐಡಿ ಟೆಕ್ನಿಕಲ್ ಸೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಹಿರಿಯ ಅಧಿಕಾರಿಗಳು ಕೇಸ್ ಸಂಬಂಧ ಅಧಿಕೃತವಾಗಿ ಸಿಡಿಆರ್ ಪಡೆಯಲು ಸರ್ವಿಸ್ ಪ್ರವೈಡ್ ಗಳಿಗೆ ನೀಡುವ ಪತ್ರದಲ್ಲಿ ತನಗೆ ಬೇಕಾದ ಫೋನ್ ನಂಬರ್ ಗಳನ್ನ ಸೇರಿಸಿ ಸಿಡಿಆರ್ ಪಡೆಯುತ್ತಿದ್ದ. ಸಿಡಿಆರ್ ಬಂದ ನಂತರ ಅಧಿಕೃತವಾದ ಸಿಡಿಆರ್ ಗಳನ್ನ ಅಧಿಕಾರಿಗಳಿಗೆ ನೀಡಿ ಅನಧಿಕೃತ ಸಿಡಿಆರ್ ಗಳನ್ನ ನಾಗೇಶ್ವರ ರೆಡ್ಡಿಗೆ ನೀಡ್ತಿದ್ದ.

ಗಂಡ-ಹೆಂಡತಿ, ಪ್ರೇಮಿಗಳ ನಡುವಿನ ಅನುಮಾಕ್ಕೆ ಹೆಚ್ಚು ಸಿಡಿಆರ್ ಗಳ ಬಳಕೆ ಶಂಕೆ

ಇನ್ನು ಈ ಸಿಡಿಆರ್ ಪಡೆಯುತ್ತಿದ್ದವರು ಯಾರು ಅಂತ ನೋಡೊದಾದ್ರೆ ಹೆಚ್ಚಾಗಿ ಗಂಡ ಅಥವಾ ಹೆಂಡತಿ‌ ಮತ್ತು ಪ್ರೇಮಿಗಳು ಸಂಬಂಧದಲ್ಲಿ ಅನುಮಾನ ಮೂಡಿ ತಮ್ಮ ಪ್ರೀತಿ ಪಾತ್ರರ ಯಾರ ಸಂಪರ್ಕದಲ್ಲಿದ್ದಾರೆ ಅನ್ನೋದನ್ನ ತಿಳಿದುಕೊಳ್ಳಲು ಈ ಕಾಲ್ ಡಿಟೈಲ್ ನ ಅನಧಿಕೃತವಾಗಿ ಪಡೆದುಕೊಳ್ಳುತ್ತಿದ್ರು ಎನ್ನಲಾಗ್ತಿದೆ. ಅಷ್ಟೇ ಅಲ್ಲದೆ ಬ್ಯುಸಿನೆಸ್ ಮೆನ್ ಗಳ ಕೆಲ ರಾಜಕೀಯ ವ್ಯಕ್ತಿಗಳು ತಮ್ಮ ಎದುರಾಳಿಗಳ ಸಿಡಿಆರ್ ಪಡೆದಿರೋ ಶಂಕೆ ವ್ಯಕ್ತವಾಗಿದೆ. ಇದ್ರಲ್ಲಿ ಕೆಲ ಪೊಲೀಸ್ ಅಧಿಕಾರಿಗಳ ಪತ್ನಿಯರು ತಮ್ಮ ಪತಿಯ ಕಾಲ್ ಡಿಟೈಲ್ ಪಡೆದಿದ್ದಾರಂತೆ. ಸದ್ಯ ನಾಗೇಶ್ವರ ರೆಡ್ಡಿ ಮತ್ತು ಪೊಲೀಸ್ ಸಿಬ್ಬಂದಿ ಮುನಿರತ್ನ ಬಂಧಿಸಿರೋ ಸಿಸಿಬಿ ಹಚ್ಚಿನ ವಿಚಾರಣಗೆ ಒಳಪಡಿಸಿದೆ.

Comments (0)

Your email address will not be published. Required fields are marked *

Back to top button