ನವದೆಹಲಿ: ರಾಷ್ಟ್ರ ರಾಜಧಾನಿಯಾದ್ಯಂತ ದಟ್ಟ ಮಂಜು ಆವರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜೋರ್ಡಾನ್ ಇಥಿಯೋಪಿಯಾ ಮತ್ತು ಓಮನ್ ದೇಶಗಳ ಮೂರು ರಾಷ್ಟ್ರಗಳ ಪ್ರವಾಸದ ವಿಮಾನವು ವಿಳಂಬವಾಗಿದೆ.. ಬೆಳಗ್ಗೆ 8.30ಕ್ಕೆ ಹೊರಡಬೇಕಿದ್ದ ವಿಮಾನ ಕಡಿಮೆ ಗೋಚರತೆಯ ಕಾರಣ ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ತೊಂದರೆ ಉಂಟಾಗಿದ್ದು, 9.30 ಕಕೆ ಪ್ರಧಾನಿ ಮೋದಿ ಅವರು ವಿಮಾನ ಏರಿದರು..
ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸಕ್ಕೆ ಹೊರಡುವ ಮೊದಲು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಹಿಸ್ ಮೆಜೆಸ್ಟಿ ಕಿಂಗ್ ಅಬ್ದುಲ್ಲಾ II ಇಬ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ನಾನು ಜೋರ್ಡಾನ್‌ಗೆ ಭೇಟಿ ನೀಡುತ್ತಿದ್ದೇನೆ. ಈ ಐತಿಹಾಸಿಕ ಭೇಟಿಯು ನಮ್ಮ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದ 75 ವರ್ಷಗಳ ನೆನಪಿಗೆ ಸಾಕ್ಷಿಯಾಗಲಿದೆ, ಎಂದು ತಿಳಿಸಿದ್ದಾರೆ.


