ಆರ್‌ಜೆಡಿ ಮತ್ತು ಕಾಂಗ್ರೆಸ್ ನಾಯಕರು ನನ್ನ ತಾಯಿಯನ್ನು ನಿಂದಿಸಿದರು. ಈ ನಿಂದನೆಗಳು ನನ್ನ ತಾಯಿಗೆ ಮಾಡಿದ ಅವಮಾನ ಮಾತ್ರವಲ್ಲ. ಇದು ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು.
ಬಿಹಾರದಲ್ಲಿ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ತಮ್ಮ ಮತ್ತು ತಮ್ಮ ತಾಯಿಯ ವಿರುದ್ಧ ಅಶ್ಲೀಲ ಪದಗಳಿಂದ ಕೂಡಿದ ಘೋಷಣೆಗಳನ್ನು ಕೂಗಿದ್ದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆರ್‌ಜೆಡಿ ಮತ್ತು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್‌ಜೆಡಿ-ಕಾಂಗ್ರೆಸ್ ತಮ್ಮ ತಾಯಿಯನ್ನು ನಿಂದಿಸಬಹುದು ಎಂದು ಯಾರೂ ಊಹಿಸಿರಲಿಲ್ಲ ಎಂದು ಹೇಳಿದರು. ಈ ನಿಂದನೆ ನನ್ನ ತಾಯಿಗೆ ಮಾಡಿದ ಅವಮಾನ ಮಾತ್ರವಲ್ಲ, ಇದು ದೇಶದ ಎಲ್ಲ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನ. ನನ್ನ ಹೃದಯದಲ್ಲಿ ನನಗೆ ಎಷ್ಟು ನೋವಿದೆಯೋ ಅಷ್ಟೇ ನೋವು ಬಿಹಾರದ ಜನರಲ್ಲೂ ಅಷ್ಟೆ ನೋವಿದೆ ಎಂದು ನನಗೆ ತಿಳಿದಿದೆ. ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ ತಮ್ಮ ತಾಯಿಯನ್ನು ಆರ್‌ಜೆಡಿ-ಕಾಂಗ್ರೆಸ್ ಏಕೆ ನಿಂದಿಸಿತು ಎಂದು ಪ್ರಶ್ನಿಸಿದರು.
ನನ್ನ ತಾಯಿ ನಮ್ಮೆಲ್ಲರನ್ನೂ ತೀವ್ರ ಬಡತನದಲ್ಲಿ ಬೆಳೆಸಿದರು. ಅವರು ಎಂದಿಗೂ ತನಗಾಗಿ ಹೊಸ ಸೀರೆಯನ್ನು ಖರೀದಿಸಲಿಲ್ಲ ಮತ್ತು ನಮ್ಮ ಕುಟುಂಬಕ್ಕಾಗಿ ಪ್ರತಿ ಪೈಸೆಯನ್ನೂ ಉಳಿಸುತ್ತಿದ್ದರು. ನನ್ನ ತಾಯಿಯಂತೆ, ನನ್ನ ದೇಶದ ಕೋಟ್ಯಂತರ ತಾಯಂದಿರು ಪ್ರತಿದಿನ ‘ತಪಸ್ಸು’ ಮಾಡುತ್ತಾರೆ ಎಂದು ಭಾವುಕರಾದರು.