ದೇಶ/ವಿದೇಶ

ಯುದ್ಧ ಪರಿವೀಕ್ಷಿಸಿದ ಪ್ರಧಾನಿ ಮೋದಿ

ಪಾಕಿಸ್ತಾನದ ಮೇಲೆ ಭಾರತ ಯುದ್ಧ ಸಾರಿದೆ. ಭಾರತದ ಮೇಲಿನ ದಾಳಿಗೆ ಭಾರತ ಇದೀಗ ಪ್ರತೀಕಾರ ತೆಗೆದುಕೊಳ್ಳುತ್ತಿದೆ. ಇದರ ನಡುವೆ ಪ್ರಧಾನಿ ಮೋದಿಯವರೇ ಖುದ್ದು ಯುದ್ಧ ಸನ್ನಿವೇಶದ ಪರಿವೀಕ್ಷಣೆ ಮಾಡುತ್ತಿದ್ದಾರೆ.

ಭಾರತೀಯ ಸೇನೆಗೆ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಕೊಟ್ಟಿದೆ. ಪ್ರಧಾನಿ ಮೋದಿಯವರು ನಿರಂತರವಾಗಿ ರಕ್ಷಣಾಪಡೆಗಳ ಮುಖ್ಯಸ್ಥರ ಜೊತೆ ಮೀಟಿಂಗ್ ಮೇಲೆ ಮೀಟಿಂಗ್ ನಡೆಸ್ತಿದ್ದಾರೆ. ಯುದ್ಧದ ಸ್ಥಿತಿಗತಿಗಳ ಬಗ್ಗೆ ಕ್ಷಣ ಕ್ಷಣಕ್ಕೂ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ ಮೇಲಿಂದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಕೂಡ ಸಭೆ ನಡೆಸುತ್ತಿದ್ದಾರೆ.

ಪ್ರಧಾನಿ ಮೋದಿಯವರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಅಜಿತ್ ದೋವಲ್ ಮಾಹಿತಿ ನೀಡುತ್ತಿದ್ದಾರೆ.

Comments (0)

Your email address will not be published. Required fields are marked *

Back to top button