ನಿಖಿಲ್ ಕಾಮತ್ ಅವರ ಜನಪ್ರಿಯ ಕಾರ್ಯಕ್ರಮ “ಪೀಪಲ್ ಬೈ ಡಬ್ಲ್ಯುಟಿಎಫ್” ನಲ್ಲಿ ಅತಿಥಿಯಾಗಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು.
ನಿಖಿಲ್ ಕಾಮತ್ ಕಳೆದ ಎರಡು ಮೂರು ವರ್ಷಗಳಿಂದ ಪೋಡ್ಕ್ಯಾಸ್ಟಿಂಗ್ ಮಾಡುತ್ತಾ ಬಂದಿದ್ದಾರೆ. ಪೀಪಲ್ ಬೈ ಡಬ್ಲ್ಯುಟಿಎಫ್ ಸರಣಿಯಲ್ಲಿ ನರೇಂದ್ರ ಮೋದಿ ಅವರ ಸಂದರ್ಶನವು ಆರನೇ ಎಪಿಸೋಡ್ ಆಗಿದೆ. ರಣಬೀರ್ ಕಪೂರ್, ನಂದನ್ ನಿಲೇಕಣಿ, ರಿಯಲ್ ಎಸ್ಟೇಟ್ ಉದ್ಯಮಿಗಳು, ಯಾನ್ ಲೀಕುನ್ ಮೊದಲಾದವರ ಸಂದರ್ಶನವನ್ನು ಈ ಸರಣಿಯಲ್ಲಿ ಮಾಡಲಾಗಿದೆ. ದೇಶದ ಪ್ರಧಾನಿಯನ್ನು ಈ ವೇದಿಕೆಗೆ ಕರೆತಂದದ್ದು ನಿಖಿಲ್ ಕಾಮತ್ ಅವರ ಪೋಡ್ಕ್ಯಾಸ್ಟ್ ಆಂಟ್ರಪ್ರನ್ಯೂರ್ ಸಾಹಸದಲ್ಲಿ ಹೊಸ ಮೈಲಿಗಲ್ಲಾಗಿದೆ.