ದೇಶ/ವಿದೇಶ

ಥೈಲ್ಯಾಂಡ್​ನಲ್ಲಿ ಪ್ರಧಾನಿ ಮೋದಿ; ಅದ್ದೂರಿ ಸ್ವಾಗತ

ಬ್ಯಾಂಕಾಕ್​: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಇಂದು  ಥೈಲ್ಯಾಂಡ್ ಬಂದಿಳಿದಿದ್ದಾರೆ.

ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯರು ಪ್ರಧಾನಿ ಮೋದಿ ಅವರಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ.

ಅನಿವಾಸಿ ಭಾರತೀಯರೊಟ್ಟಿಗೆ ಪ್ರಧಾನಿ

ಎರಡು ದಿನಗಳ ಥೈಲ್ಯಾಂಡ್ ಪ್ರವಾಸದಲ್ಲಿರುವ ಪ್ರಧಾನ ಮೋದಿ, 6ನೇ BIMSTES ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಥೈಲ್ಯಾಂಡ್ ಪ್ರಧಾನಿ ಪೆಟೊಂತಾರ್ನ್ ಶಿನೋವಾರ್ಥ್​ ಅವರನ್ನು ಭೇಟಿಯಾಗಿರುವ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ಥೈಲ್ಯಾಂಡ್ ರಾಜ ಮಹಾ ವಾಜಿರಲೊಂಗ್ ಕೋರ್ನ್​ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಲಿದ್ದಾರೆ.

ಭಾರತ- ಥೈಲ್ಯಾಂಡ್ ಪಾಲುದಾರಿಕೆಗೆ ಸಂದಂಧಿಸಿದಂತೆ ಉಭಯ ನಾಯಕರು ವಿಸ್ತೃತ ಚರ್ಚೆ ನಡೆಸಲಿದ್ದಾರೆಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಸಂದರ್ಭದಲ್ಲಿ ಥಾಯ್​ ರಾಮಾಯಣ ವಿಶೇಷ ಪ್ರದರ್ಶನವನ್ನು ಪ್ರಧಾನಿ ಮೋದಿ ವೀಕ್ಷಿಸಿದ್ದಾರೆ. ಈ ಸಂಬಂಧ ಎಕ್ಸ್​ನಲ್ಲಿ ಬರೆದುಕೊಂಡು ರಾಮಾಯಣವು ಏಷ್ಯಾದ ಹಲವು ಭಾಗಗಳಲ್ಲಿ ಸಂಪ್ರದಾಯವನ್ನು ಸಂಪರ್ಕಿಸುತ್ತದೆ ಎಂದು ಬಣ್ಣಿಸಿದ್ದಾರೆ.

ಥಾಯ್​ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ

Comments (0)

Your email address will not be published. Required fields are marked *

Back to top button