ಸಮುದ್ರ ಗರ್ಭದಲ್ಲಿರುವ ಹಿಂದೂಗಳ ಪುರಾತನ ಅಧ್ಯಾತ್ಮಿಕ ನಗರ ದ್ವಾರಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದರ್ಶಿಸಿದ್ದಾರೆ. ಕೆಲ ತಿಂಗಳ ಅಂತರದಲ್ಲಿಯೇ ಎರಡನೇ ಬಾರಿ ಸ್ಕೂಬಾ ಡೈವಿಂಗ್ ಮಾಡಿದ ಪ್ರಧಾನಿ ಮೋದಿ ಸಮುದ್ರ ತಳದಲ್ಲಿರುವ ಪವಿತ್ರ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಿಂದೊಮ್ಮೆ ಶ್ರೀಕೃಷ್ಣನು ದ್ವಾರಕಾ ನಗರವನ್ನು ಪರಿಪಾಲಿಸಿದ್ದ ಎಂಬುದು ನಂಬಿಕೆ.
ಬೆಟ್ ದ್ವಾರಕಾ ದ್ವೀಪದ ಬಳಿ ಪ್ರಧಾನಿ ನರೇಂದ್ರ ಮೋದಿ ಅಗತ್ಯವಾದ ಪರಿಕರಗಳನ್ನು ಧರಿಸಿ ಸ್ಕೂಬಾ ಡೈವಿಂಗ್ ಮಾಡಿದರು. ಪುರಾತನ ನಗರದ ಅವಶೇಷಗಳ ಬಳಿಗೆ ತೆರಳಿದ ಪ್ರಧಾನಿ ಮೋದಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Dwarka Darshan under the waters…where the spiritual and the historical converge, where every moment was a divine melody echoing Bhagwan Shri Krishna's eternal presence. pic.twitter.com/2HPGgsWYsS
— Narendra Modi (@narendramodi) February 25, 2024
ನಂತರ ತಮ್ಮ ಅನುಭವಗಳನ್ನು ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಹೀಗೆ..
ಸಮುದ್ರಗರ್ಭದಲ್ಲಿರುವ ದ್ವಾರಕೆಯಲ್ಲಿ ಪೂಜೆ ಮಾಡುವುದು ಒಂದು ದಿವ್ಯವಾದ ಅನುಭವ. ಪುರಾತನ ಯುಗದಲ್ಲಿನ ಕಾಲಾತೀತವಾದ ಭಕ್ತಿಗೆ ಅನುಸಂಧಾನವಾದ ಅನುಭೂತಿಯನ್ನು ಪಡೆದೆನು. ಶ್ರೀಕೃಷ್ಣನು ಎಲ್ಲರಿಗೂ ಅನುಗ್ರಹಿಸುತ್ತಾನೆ
– ನರೇಂದ್ರ ಮೋದಿ, ಪ್ರಧಾನಮಂತ್ರಿ
ಭಾರತದ ಸಪ್ತ ಮೋಕ್ಷದಾಯಕ ನಗರಗಳಲ್ಲಿ ದ್ವಾರಕಾ ಕೂಡ ಒಂದು ಎಂಬುದು ನಂಬಿಕೆ.ಪಶ್ಚಿಮ ಸಮುದ್ರತೀರದ ಸೌರಾಷ್ಟ್ರದಲ್ಲಿ ದ್ವಾರಕಾ ನಗರ ಇದೆ.ಅದನ್ನು ದ್ವಾರಾವತಿ ಎಂಬ ಹೆಸರಿನಿಂದ ವ್ಯವಹರಿಸುತ್ತಿದ್ದರು. ಅನೇಕ ದ್ವಾರಗಳು ಇರುವ ಕಾರಣ ಇದಕ್ಕೆ ಈ ಹೆಸರು ಬಂತು ಎಂಬುದು ಪ್ರತಿತಿ.
ಜರಾಸಂಧನೆಂಬ ರಾಕ್ಷಸನ ದಾಳಿಯಿಂದ ರಕ್ಷಣೆ ಹೊಂದಲು ಸುರಕ್ಷಿತವಾದ ಪ್ರಾಂತ್ಯ ಬೇಕೆಂಬ ಶ್ರೀಕೃಷ್ಣನ ಕೋರಿಕೆ ಮೇರೆಗೆ ವಿಶ್ವಕರ್ಮನು ದ್ವಾರಕಾ ನಗರ ನಿರ್ಮಿಸಿದ ಎಂದು ಪುರಾಣಗಳು ಹೇಳುತ್ತವೆ. ಈ ಸುಂದರ ನಗರ ಅರಬ್ಬಿ ಸಮುದ್ರದಲ್ಲಿ ಮುಳುಗಿದ ಕಾರಣ ಭಕ್ತರು ಅಲ್ಲಿಗೆ ಹೋಗಲು ಸಾಧ್ಯ ಆಗುತ್ತಿರಲಿಲ್ಲ.
ಇದೀಗ ಈ ಪ್ರಾಚೀನ ನಗರವನ್ನು ಕಣ್ತುಂಬಿಕೊಳ್ಳಲು ಗುಜರಾತ್ ಸರ್ಕಾರ ಜಲಂತಾರ್ಗಾಮಿ ಸೇವೆಯನ್ನು ಶುರು ಮಾಡುತ್ತಿದೆ.