ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಸ್ವಲ್ಪ ಭಯ, ಗೊಂದಲ ಆಗುವುದು ಸಹಜ. ಅದರಂತೆ ಇಲ್ಲೊಬ್ಬಳು ಮಹಿಳೆ ತನ್ನ ಮೊದಲ ವಿಮಾನ ಪ್ರಯಾಣದ ವೇಳೆ ಎಡವಟ್ಟು ಮಾಡಿಕೊಂಡಿದ್ದು, ಸದ್ಯ ಘಟನೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಮಹಿಳೆ ವಿಮಾನದಲ್ಲಿ ಟಾಯ್ಲೆಟ್ ಬಾಗಿಲು ಎಂದು ಭಾವಿಸಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆರೆದಿದ್ದಾಳೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಜುಲೈ 4 ರಂದು ಚೀನಾದ ಪೂರ್ವ ನಗರವಾದ ಕುಝೌದಿಂದ ಏರ್ ಚೀನಾ ವಿಮಾನವು ದೇಶದ ನೈಋತ್ಯ ಭಾಗದಲ್ಲಿರುವ ಚೆಂಗ್ಡುವಿಗೆ ಹಾರಬೇಕಿತ್ತು, ಆದರೆ ಮಹಿಳಾ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದಿದ್ದಾರೆ. ಇದರಿಂದಾಗಿ ವಿಮಾನದಿಂದ ಪ್ರಯಾಣಿಕರನ್ನು ಹೊರತಂದು ವಿಮಾನ ಹಾರಾಟವನ್ನೂ ರದ್ದುಗೊಳಿಸಲಾಗಿದೆ. ಅದೃಷ್ಟವಶಾ ಈ ಘಟನೆಯಿಂದಾಗಿ ಭಾರೀ ಅನಾಹುತ ತಪ್ಪಿದೆ.
ವರದಿಗಳ ಪ್ರಕಾರ, ವಿಮಾನದ ಸಿಬ್ಬಂದಿಗಳನ್ನು ಕೇಳದೆ ಏಕಾಏಕಿ ತುರ್ತುನಿರ್ಗಮನದ ಬಾಗಿಲು ತೆರೆದ ಮಹಿಳೆಯನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. “ಶೌಚಾಲಯ ಎಲ್ಲಿದೆ” ಎಂದು ಸಿಬ್ಬಂದಿಯನ್ನು ಕೇಳಬಹುದಿತ್ತು’ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ತಿಳಿಸಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com