ಕಳೆದ ನಾಲ್ಕನೇ ತಾರೀಕಿನಂದು ಗುಂಡ್ಲುಪೇಟೆಯ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ಐದು ಜನ ಸದಸ್ಯರಾದ ಕಿರಣ್, ಹೀನ ಕೌಸರ್, ರಮೇಶ್, ವೀಣಾ ರಾಣಿ, ಲಕ್ಷ್ಮೀದೇವಿ ರವರುಗಳು ಕಾಂಗ್ರೆಸ್ ಪಕ್ಷ ಸೇರಿದ್ದು ಇದರಲ್ಲಿ ಬಿಜೆಪಿಯಿಂದ ಹೋದ ಕಿರಣ್ ಅಧ್ಯಕ್ಷರಾಗಿಯೂ ಹೀನ ಕೌಸರ್ ಉಪಾಧ್ಯಕ್ಷರಾಗಿಯು ಆಯ್ಕೆಯಾಗಿದ್ದರು ಇದರಿಂದ ಬಿಜೆಪಿ ವತಿಯಿಂದ ಈ ಐದು ಜನ ಸದಸ್ಯರಿಗೆ ಪಕ್ಷಾಂತರ ವಿಪ್ ನೀಡಲಾಗಿತ್ತು, ಇಂದು ಬಿಜೆಪಿಯ ಮಾಜಿ ಪುರಸಭಾ ಅಧ್ಯಕ್ಷ ಪಿ ಗಿರೀಶ್ ರವರು ಹಾಗೂ ವಕೀಲರೊಂದಿಗೆ ಪ್ರೆಸ್ ಮೀಟ್ ನಡೆಸಿ ಈ ಐವರ ಸದಸ್ಯತ್ವವನ್ನು ವಜಾಗೊಳಿಸಬೇಕೆಂದು, ಪುರಸಭಾ ಮುಖ್ಯ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಎಲ್ ಸುರೇಶ್ ಸದಸ್ಯರಾದ ನಾಗೇಶ್ ದೀಪಿಕಾ ಪಟ್ಟಾಭಿ ಕುಮಾರ್ ರವರುಗಳು ಉಪಸ್ಥಿತರಿದ್ದರು.