ರಾಜ್ಯ

ಸಿಎಂ ಭಾಷಣಕ್ಕೆ ಇರಲೇ ಇಲ್ಲ ಜನ – ಕಾಂಗ್ರೆಸ್ ಸಮಾವೇಶದಲ್ಲಿ ಖಾಲಿ ಖಾಲಿ

ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಭೈರದೇನಹಳ್ಳಿಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ನಡೀತು.. ಈ ಸಮಾವೇಶದಲ್ಲಿ ಜನರೇ ಇಲ್ಲದೆ ಕುರ್ಚಿಗಳು ಬಣಗುಡುತ್ತಿದ್ದವು

ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವಾಗಲೂ ಜನರೇ ಇರಲಿಲ್ಲ..  ಸಚಿವ ಕೆ.ಹೆಚ್.ಮುನಿಯಪ್ಪ ನೇತೃತ್ವದಲ್ಲಿ ನಡೆದ 2 ವರ್ಷದ ಸಾಧನೆ ಸಾಮಾವೇಶ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು.

ಸಚಿವ ಜಮೀರ್, ಸಚಿವ ಹೆಚ್.ಸಿ. ಮಹದೇವಪ್ಪ, ಬೋಸರಾಜು ಸೇರಿದಂತೆ  ಇಡೀ ಸರ್ಕಾರವೇ ಉಪಸ್ಥಿತಿ ಇದ್ದ ಕಾರ್ಯಕ್ರಮಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು

ಸಚಿವ ಕೆ.ಹೆಚ್.ಮುನಿಯಪ್ಪ ಅವರು ಬರೋಬ್ಬರಿ ಒಂದು ವಾರಗಳ ಕಾಲ ಈ ಸಮಾವೇಶ ನಡೆಸಲು ಸಿದ್ದತೆ ನಡೆಸಿದ್ದರು.

ಈ ಮೊದಲು ಮೊದಲು ಸಿಎಂ ಭಾಷಣ ಕೇಳಲು ಜನ ಮುಗಿಬಿದ್ದು ಬರ್ತಿದ್ರು. ಆದ್ರೆ ದೇವನಹಳ್ಳಿ ಸಮಾವೇಶಕ್ಕೆ ಸಿದ್ದು ಭಾಷಣ ಕೇಳಲು ಜನ ನಿರುತ್ಸಾಹ ತೋರಿದ್ರು.  ಕೋಟ್ಯಾಂತರ ರೂಗಳು ಖರ್ಚು ಮಾಡಿದ್ದ  ಸಾಧನೆ ಸಮಾವೇಶ ಸಂಪೂರ್ಣ ವಿಫಲ ಆಯ್ತು

Comments (0)

Your email address will not be published. Required fields are marked *

Back to top button