Thursday, January 29, 2026
20.3 C
Bengaluru
Google search engine
LIVE
ಮನೆಸಿನಿಮಾಎರಡೇ ದಿನಕ್ಕೆ 100 ಕೋಟಿ ಕ್ಲಬ್​​ ಸೇರಿದ ಪವನ್ ಕಲ್ಯಾಣ್ ನಟನೆಯ OG ಸಿನಿಮಾ

ಎರಡೇ ದಿನಕ್ಕೆ 100 ಕೋಟಿ ಕ್ಲಬ್​​ ಸೇರಿದ ಪವನ್ ಕಲ್ಯಾಣ್ ನಟನೆಯ OG ಸಿನಿಮಾ

ಟಾಲಿವುಡ್​ ಸ್ಟಾರ್​ ಹಿರೋ ಮತ್ತು ಆಂಧ್ರಪ್ರದೇಶದ ಡಿಸಿಎಂ ಪವನ್​ ಕಲ್ಯಾಣ್​​ ಅವರ ನಟನೆಯ ದೇ ಕಾಲ್ ಹೀಮ್ ಓಜಿ ಸಿನಿಮಾ ಬಿಡುಗಡೆಯಾದ ಎರಡೇ ದಿನದಲ್ಲಿ ಭಾರತದಲ್ಲಿ ನೂರು ಕೋಟಿ ರೂಪಾಯಿಗಿಂತ ಹೆಚ್ಚಿನ ಗಳಿಕೆಯನ್ನು ಕಂಡಿದೆ.

2025 ರಲ್ಲಿ ದೊಡ್ಡ ಗಳಿಕೆ ಕಂಡ ಸಿನಿಮಾ ಆಗಿ ಹೊರಹೊಮ್ಮಿದ್ದು, ದೇ ಕಾಲ್ ಹೀಮ್ ಓಜಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ದಾಖಲೆಯನ್ನೇ ನಿರ್ಮಿಸಿದೆ. ಗ್ಯಾಂಗಸ್ಟರ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಆದ ಓಜಿ, ರಜನಿಕಾಂತ್ ಅವರ ಕೂಲಿ ಸಿನಿಮಾದ ದಾಖಲೆಯನ್ನು ಮುರಿದಿದೆ. ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ಏಳನೇ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಆಗಿದೆ.

ಭಾರತದ ಸಿನಿಮಾ ಇಂಡಸ್ಟ್ರೀಯಲ್ಲಿ ದೊಡ್ಡ ಓಪನಿಂಗ್ ಪಡೆದ 8ನೇ ಸಿನಿಮಾ ಆಗಿದೆ. ಓಜಿ ಸಿನಿಮಾವು ಮೊದಲ ದಿನವೇ ಪ್ರೀಮೀಯರ್ ಷೋ ಸೇರಿದಂತೆ ಬರೋಬ್ಬರಿ 90 ಕೋಟಿ ರೂಪಾಯಿ ಬಾಚಿಕೊಂಡಿದೆ. ಆದರೇ, ಎರಡನೇ ಓಜಿ ಸಿನಿಮಾ 19.6 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನದ ಗಳಿಕೆಯೂ ಮೊದಲ ದಿನಕ್ಕೆ ಹೋಲಿಸಿದರೇ, ಶೇ.69 ರಷ್ಟು ಕುಸಿತವಾಗಿದೆ. ಆದರೂ ಮೊದಲ ಎರಡು ದಿನಗಳಲ್ಲೇ 104.35 ಕೋಟಿ ರೂಪಾಯಿ ಗಳಿಕೆ ಕಂಡಿರುವುದು ವಿಶೇಷ.

ಇನ್ನೂ ಓಜಿ ಸಿನಿಮಾವು ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಮೊದಲ ದಿನ ಒಟ್ಟಾರೆಯಾಗಿ 144 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನದ ಗಳಿಕೆಯಲ್ಲಿ ಪ್ರಭಾಸ್ ನಟನೆಯ ಸಾಹೋ ಸಿನಿಮಾವನ್ನು ಹಿಂದಿಕ್ಕಿದೆ. ಓಜಿ ಸಿನಿಮಾದಲ್ಲಿ ಡಿಸಿಎಂ ಪವನ್ ಕಲ್ಯಾಣ್ ಓಜಾಸ್ ಗಂಭೀರ್ ಪಾತ್ರದಲ್ಲಿ ನಟಿಸಿದ್ದರು.ಇನ್ನೂ ಸಿನಿಮಾದಲ್ಲಿ ಪ್ರಕಾಶ್ ರಾಜ್, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಶ್ರೀಯಾರೆಡ್ಡಿ, ಜಾಕಿ ಶ್ರಾಫ್ ನಟಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments