2024 ಮುಗಿಯುತ್ತಾ ಬಂತು. ಈ ವರ್ಷ ಭಾರತ ಮತ್ತು ವಿಶ್ವದಾದ್ಯಂತ ಹಲವು ಪ್ರಮುಖ ಘಟನೆಗಳು ನಡೆದಿವೆ. ಮನೊರಂಜನಾ ಕ್ಷೇತ್ರದಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳು ನಡೆದಿವೆ. ಹೊಸ ಸ್ಟಾರ್​ಗಳು ಹುಟ್ಟಿದ್ದಾರೆ, ಕೆಲವು ಅದ್ಭುತ ಸಿನಿಮಾಗಳು ಬಂದಿವೆ. ಇದೀಗ ಗೂಗಲ್, ಈ ವರ್ಷ ಜನ ಅತಿ ಹೆಚ್ಚು ಹುಡುಕಾಟಿದ ನಟ, ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ ವಿಶ್ವದಲ್ಲಿಯೇ ಈ ವರ್ಷ ಅತಿ ಹೆಚ್ಚು ಹುಡುಕಾಡಲ್ಪಟ್ಟ ನಟರ ಪಟ್ಟಿಯಲ್ಲಿ ತೆಲುಗಿನ ಸ್ಟಾರ್ ನಟ ಪವನ್​ ಕಲ್ಯಾಣ್​ಗೆ ಎರಡನೇ ಸ್ಥಾನ ದೊರೆತಿದೆ.

ಹಾಲಿವುಡ್ ನಟ ಕೇಟ್ ವಿಲಿಯಮ್ಸ್​ ವಿಶ್ವದಲ್ಲೇ ಅತಿ ಹೆಚ್ಚು ಹುಡುಕಲ್ಪಟ್ಟ ನಟರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ನಟ ಪವನ್ ಕಲ್ಯಾಣ್ ಇದ್ದಾರೆ. ವಿಶೇಷವೆಂದರೆ 2024 ರಲ್ಲಿ ಪವನ್ ಕಲ್ಯಾಣ್ ಅವರ ಒಂದೇ ಒಂದು ಸಿನಿಮಾ ಸಹ ಬಿಡುಗಡೆ ಆಗಿಲ್ಲ. ಆದರೂ ಸಹ ಅವರ ಜನಪ್ರಿಯ ತಗ್ಗಿಲ್ಲ ಬದಲಿಗೆ ವಿಶ್ವಮಟ್ಟದಲ್ಲಿ ಹೆಚ್ಚಿದೆ. ಇದಕ್ಕೆ ಕಾರಣ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ.

ಜನಸೇನಾ ಪಕ್ಷದ ಸಂಸ್ಥಾಪಕರೂ ಆಗಿರುವ ಪವನ್ ಕಲ್ಯಾಣ್, ಈ ಬಾರಿ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು. ಚುನಾವಣೆ ನಡೆಯುವವರೆಗೂ ಪ್ರತಿದಿನ ಸುದ್ದಿಯಲ್ಲಿದ್ದ ಪವನ್ ಕಲ್ಯಾಣ್, ಆ ನಂತರ ಚುನಾವಣೆ ಫಲಿತಾಂಶ ಬಂದ ಬಳಿಕ ಗೆದ್ದು ಆಂಧ್ರ ಪ್ರದೇಶದ ಡಿಸಿಎಂ ಸಹ ಆಗಿದ್ದು, ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಾಗಿ ಸಹಜವಾಗಿಯೇ ಪವನ್ ಕಲ್ಯಾಣ್ ಬಗ್ಗೆ ಹೆಚ್ಚಿನ ಜನ ನಿಯಮಿತವಾಗಿ ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದು ಪವನ್ ಕಲ್ಯಾಣ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟವರ ಪಟ್ಟಿಯಲ್ಲಿಯೂ ಸಹ ಪವನ್ ಕಲ್ಯಾಣ್ ಇದ್ದಾರೆ.

Leave a Reply

Your email address will not be published. Required fields are marked *

Verified by MonsterInsights