ಸುದ್ದಿ

ಪವನ್​ ಕಲ್ಯಾಣ ಪುತ್ರನಿಗೆ ಸೀರಿಯಸ್​..!

ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕಿರಿಯ ಮಗ ಮಾರ್ಕ್ ಶಂಕರ್, ಸಿಂಗಾಪೂರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದಾರೆ. ಮಾರ್ಕ್ ಶಂಕರ್ ಓದುತ್ತಿದ್ದ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಮಾರ್ಕ್ ಶಂಕರ್ ಬೆಂಕಿಯಲ್ಲಿ ಸಿಲುಕಿ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಶ್ವಾಸಕೋಶಕ್ಕೆ ಹೊಗೆ ಹೋದ ಹಿನ್ನೆಲೆ ತೀವ್ರ ಅನಾರೋಗ್ಯಕ್ಕಿಡಾಗಿದ್ದಾರೆ.

ಕುರಿಡಿ ಗ್ರಾಮದ ಬುಡಕಟ್ಟು ಜನಾಂಗದವರನ್ನು ಭೇಟಿ ಮಾಡಿ ಆ ನಂತರ ಅಲ್ಲಿರುವ ದೇವಸ್ಥಾನಕ್ಕೆ ತೆರಳಲಿರುವ ಪವನ್ ಕಲ್ಯಾಣ್ ಆ ನಂತರ ಸಿಂಗಾಪೂರಗೆ ತೆರಳಲಿದ್ದಾರೆ. ಇನ್ನು ಕುರಿಡಿ ಗ್ರಾಮದ ನಂತರ ಪವನ್ ಕಲ್ಯಾಣ್ ವಿಶಾಖಪಟ್ಟಣಂನಲ್ಲಿರುವ ಸ್ಟೀಲ್ ಪ್ಲಾಂಟ್‌ಗೆ ಭೇಟಿ ನೀಡಬೇಕಿತ್ತು. ಮುಂದಿನ ಮೂರು ದಿನಗಳ ಕಾಲ ವಿಶಾಖಪಟ್ಟಣಂನಲ್ಲಿ ಇರಬೇಕಿತ್ತು. ಆದರೆ ಈಗ ಪವನ್ ಕಲ್ಯಾಣ್ ತಮ್ಮ ಈ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button