ಬೆಂಗಳೂರು: ದರ್ಶನ್ ತೂಗುದೀಪ್ ಅವರ ಅತಿ ಆಪ್ತ ಗೆಳತಿ & ಕನ್ನಡ ಸಿನಿಮಾ ರಂಗದ ಮಾಜಿ ನಟಿ ಆಗಿರುವ ಪವಿತ್ರಾ ಗೌಡ ಇದೀಗ ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದು ನುಂಗುತ್ತಿದ್ದಾರೆ. ಪವಿತ್ರಾ ಗೌಡ ಮಾತು ಕೇಳಿ ದರ್ಶನ್ & ತಂಡ ಕೂಡ ಜೈಲು ಸೇರಿದೆ ಎನ್ನುವ ಆರೋಪಗಳ ನಡುವೆ ಇದೀಗ ಪವಿತ್ರಾ ಗೌಡ ಮತ್ತೊಮ್ಮೆ ಪ್ರೆಗ್ನೆಂಟ್ ಅಂದ್ರೆ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ!
ದರ್ಶನ್ ತೂಗುದೀಪ್ & ಪವಿತ್ರಾ ಗೌಡ ರೇಣುಕಾಸ್ವಾಮಿ ಎಂಬ ವ್ಯಕ್ತಿ ಕೊಲೆ ಕೇಸ್‌ನಲ್ಲಿ ಮುಖ್ಯ ಆರೋಪಿಗಳಾಗಿ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಕಂಬಿಗಳ ಹಿಂದೆ ಈ ಇಬ್ಬರು ನರಳುತ್ತಿದ್ದಾರೆ. ಹೀಗಿದ್ದಾಗ ಹೊಸ ಸುದ್ದಿಯೊಂದು ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಓಡಾಡುವ ಜೊತೆಗೆ ಪರಪ್ಪನ ಅಗ್ರಹಾರದ ಜೈಲಿನ ಕೋಣೆಗಳಲ್ಲೂ ಸಂಚಲನ ಸೃಷ್ಟಿ ಮಾಡುತ್ತಿದೆ. ಹೀಗೆ, ಭಾರಿ ದೊಡ್ಡ ಸಂಚಲನ ಸೃಷ್ಟಿ ಆಗಲು ಕಾರಣ ‘ಪವಿತ್ರಾ ಗೌಡ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಂತೆ’ ಅನ್ನೋ ಸುದ್ದಿ! ಹಾಗಾದ್ರೆ ಈ ಸುದ್ದಿ ನಿಜಾನಾ? ಪವಿತ್ರಾ ಗೌಡ ಈಗ 2ನೇ ಮಗುವಿನ ನಿರೀಕ್ಷೆ ಇಟ್ಟುಕೊಂಡಿದ್ದಾರಾ?
ಹೌದು, ಇದೀಗ ಪವಿತ್ರಾ ಗೌಡ ಅವರು ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ಸೋಷಿಯಲ್ ಮೀಡಿಯಾ ವೇದಿಕೆಯಿಂದ ಹಿಡಿದು ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಕೂಡ ಭಾರಿ ದೊಡ್ಡ ಚರ್ಚೆ ಶುರು ಆಗುವಂತೆ ಮಾಡಿದೆ. ಅಷ್ಟಕ್ಕೂ ಪವಿತ್ರಾ ಗೌಡ ಅವರಿಗೆ ಈಗಾಗಲೇ ಒಬ್ಬ ಮಗಳು ಇದ್ದು, ಮೊದಲ ಗಂಡನಿಂದ ಪವಿತ್ರಾ ಗೌಡ ಒಂದು ಮಗುವನ್ನ ಪಡೆದಿದ್ದಾರೆ. ಆದರೆ ಇದೀಗ ಪವಿತ್ರಾ ಗೌಡ ಅವರು ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ. ಪವಿತ್ರಾ ಗೌಡ ಇದೀಗ 2ನೇ ಮಗು ನಿರೀಕ್ಷೆಯಲ್ಲಿ ಇದ್ದಾರೆ ಎಂಬ ಗಾಳಿ ಸುದ್ದಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಟ್ರೋಲ್ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.
ಒಟ್ನಲ್ಲಿ ಇದು ಗಾಳಿ ಸುದ್ದಿನಾ? ಅಥವಾ ನಿಜವಾದ ಸುದ್ದಿನಾ? ಅನ್ನೋ ಕುತೂಹಲ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಮೂಡಿದೆ. ಹೀಗಾಗಿ ಈ ಕುರಿತು ಚರ್ಚೆ ಕೂಡ ಜೋರಾಗಿದೆ. ಆದ್ರೆ ಇಲ್ಲಿಯವರೆಗೂ ಈ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಕ್ಷಣಕ್ಕೊಂದು ಸುದ್ದಿ & ಊಹಾಪೋಹ ಸೃಷ್ಟಿ ಆಗುತ್ತಿದೆ. ಕಳೆದ 2 ದಿನಗಳಿಂದ ಈ ಕುರಿತು ನಿರಂತರವಾಗಿ ಪೋಸ್ಟ್ & ವಿಡಿಯೋ ವಾರ್ ಕೂಡ ಶುರುವಾಗಿದೆ.
ಮತ್ತೊಂದು ಕಡೆ ಪವಿತ್ರಾ ಗೌಡ ಅವರು ಇನ್ನೊಂದು ಮಗು ಪಡೆಯಲು ಪ್ಲಾನ್ ಮಾಡಿದ್ರು ಅಂತಾ, ಕೂಡ ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಾ ಇದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೊತೆ ಆರೋಪಗಳ ಸುರಿಮಳೆ ಶುರುವಾಗಿದೆ. ಹೀಗಾಗಿ ಈ ಗಾಳಿ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಈಗ ಕೆಂಡದ ರೀತಿ ವೇಗವಾಗಿ ಹಬ್ಬುತ್ತಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com