ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾಗೌಡ ಹಿರಿಯ ಸಾಹಿತಿಯೊಬ್ಬರ ಹೇಳಿಕೆಯೊಂದನ್ನ ಅಪಾರ್ಥ ಮಾಡಿಕೊಂಡು ಇದೀಗ ಪೇಚಿಗೆ ಸಿಲುಕಿದ್ದಾರೆ.
ಹಿರಿಯ ಸಾಹಿತಿ, ವಿಮರ್ಶಕರಾದ ಡಾ.ಎಂ.ಎಸ್. ಆಶಾದೇವಿ ಅವರ ಭಾಷಣದ ತುಣುಕೊಂದು ತನಗೆ ಸಂಬಂಧಿಸಿದ್ದು ಅವರು ನನ್ನನ್ನು ಸಪೋರ್ಟ್ ಮಾಡಿದ್ದಾರೆ ಎಂದು ಪವಿತ್ರಾ ಗೌಡ ಖುಷಿಗೊಂಡಿದ್ದರು. ಆದರೆ ಆ ಹೇಳಿಕೆ ತನಗೆ ಸಂಬಂಧಿಸಿದ್ದಲ್ಲ ಎಂದು ಅವರಿಗೆ ಗೊತ್ತೇ ಆಗಿಲ್ಲ.. ಕೇವಲ ಭ್ರಮೆಯಲ್ಲೇ ಪವಿತ್ರಾಗೌಡ ಇದ್ದಾರೆ ಎನ್ನುವುದು ಕಡೆಗೆ ಗೊತ್ತಾಗಿದೆ.
ವಿಮರ್ಶಕರಾದ ಡಾ.ಎಂ.ಎಸ್.ಆಶಾದೇವಿ ಅವರು ಭಾಷಣವೊಂದರಲ್ಲಿ ಕಿವಿಮಾತುಗಳನ್ನ ಹೇಳಿದ್ದರು. ಅದೇನೆಂದರೆ. ಮಾಧ್ಯಮಗಳು ಕೆಲವರನ್ನ ಅವಹೇಳನ ಮಾಡುವುದನ್ನ ನಿಲ್ಲಿಸಬೇಕು ಎಂದಿದ್ದರು. ಪವಿತ್ರಾ ಎನ್ನುವವಳು ಯಾರನ್ನಾದರೂ ಮದುವೆ ಆಗಲಿ ನಿಮಗೇನು ತೊಂದರೆ? ಪವಿತ್ರಾ ಹೆಸರನ್ನು ಅಪವಿತ್ರ ಎನ್ನಲು ನಿಮಗೆ ಯಾವ ಹಕ್ಕು ಇದೆ? ಮಹಿಳೆ ಬಗ್ಗೆ ಈ ಮಾತು ಬಳಸೋದು ಸರಿನಾ ಎಂದು ಮಾಧ್ಯಮಗಳನ್ನ ಪ್ರಶ್ನಿಸಿದ್ದರು. ಆದರೆ ಇದು ತನಗಾಗಿ ತನ್ನ ಪರ ಹೇಳಿದ್ದು ಎಂದು ಪವಿತ್ರಾಗೌಡ ಭಾವಿಸಿದಂತಿದೆ. ಯಾಕೆಂದರೆ ಪವಿತ್ರಾಗೌಡ ಸಾಹಿತಿಗಳ ಆ ಮಾತನ್ನು ತನ್ನ ಇನ್ಸಟಾಗ್ರಾಮ್ ಪೋಸ್ಟ್ನಲ್ಲಿ ಹಾಕಿಕೊಂಡು ನಿಮ್ಮ ಮಾತಿನಿಂದ ನನಗೆ ತುಂಭಾ ಧೈರ್ಯ ಭರವಸೆ ಬಂತು ಮೇಡಂ ಅಂತ ಬರೆದುಕೊಂಡಿದ್ದಾರೆ.
ಅಸಲಿಗೆ ಸಾಹಿತಿ ಆಶಾದೇವಿ ಅವರ ಈ ಮಾತು ಈಗಿನದ್ದಲ್ಲ. ಈ ಬಗ್ಗೆ ಫ್ರೀಡಂ ಟಿವಿ ಕೂಡ ಆಶಾದೇವಿ ಅವರನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆದಿದೆ. ಈ ಹಿಂದೆ ನಟಿ ಪವಿತ್ರಾ ಲೋಕೇಶ್ ಅವರ ಮರು ಮದುವೆ ವಿಚಾರದ ಬಗ್ಗೆ ಆಗ ಸಾಹಿತಿ ಆಶಾದೇವಿ ಅವರು ಮಾತನಾಡಿದ್ದರು. ಯಾರು ಯಾರನ್ನಾದರೂ ಮದುವೆ ಆಗಲಿ. ಪವಿತ್ರಳನ್ನು ಅಪವಿತ್ರ ಎನ್ನಲು ನಿಮಗೆ ಏನ್ ಹಕ್ಕು ಇದೆ ಎಂದು ಅವರು ಮಾಧ್ಯಮದವರನ್ನ ಪ್ರಶ್ನಿಸಿದ್ದರು. ಆದರೆ ತನ್ನ ಪತ ನಿಂತು ಆಶಾದೇವಿ ಅವರು ಮಾತನಾಡಿದ್ದಾರೆ ಎಂದು ಪವಿತ್ರಾಗೌಡ ಭಾವಿಸಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಫ್ರೀಡಂ ಟಿವಿಗೆ ಸ್ಪಷ್ಟನೆ ಕೊಟ್ಟ ಹಿರಿಯ ಸಾಹಿತಿ ಡಾ.ಎಂ.ಎಸ್.ಆಶಾದೇವಿ ಅವರು, ಕೊಲೆ ಆರೋಪಿಯನ್ನು ಸಮರ್ಥಿಸಿಕೊಳ್ಳಲು ಆಗುವುದೇ ಇಲ್ಲ. ಈ ಹಿಂದೆ ನಾನು ಪವಿತ್ರಾ ಲೋಕೇಶ್ ಅವರ ಕುರಿತಾಗಿ ಇದನ್ನು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೊಲೆ ಆರೋಪಿಯೊಬ್ಬಳನ್ನ ಮಾಧ್ಯಮಗಳಾಗಲಿ, ಸಾಹಿತಿಗಳಾಗಲಿ ಪ್ರಶ್ನಿಸುವುದು, ಟೀಕಿಸುವುದು ವಿರೋಧಿಸುವುದು ಸರ್ವೇ ಸಾಮಾನ್ಯ. ಯಾರೇ ಕೊಲೆ ಆರೋಪಿಯನ್ನು ಹೊಗಳಿ, ಆಕೆಯನ್ನು ಅಟ್ಟಕ್ಕೇರಿಸಲು ಆದೀತೇ? ಮಾಡಿರುವುದು ಅಕ್ರಮ, ಅಪರಾಧವಾಗಿರುವಾಗ ಮಾಧ್ಯಮಗಳು ಅಂತಹವರನ್ನು ಅಪವಿತ್ರ ಎಂದರೆ ತಪ್ಪೇನಿದೆ?
ಆದರೆ ಇಲ್ಲಿ ಸಾಹಿತಿ ಆಶಾದೇವಿ ಅವರು ಪವಿತ್ರ ಲೋಕೇಶ್ ಕುರಿತಾಗಿ ಮಾತನಾಡಿದ್ದರೆ, ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರ ಗೌಡ ಅವರು ತನ್ನ ಸಪೋರ್ಟ್ಗೆ ಸಾಹಿತಿ ಬಂದಿದ್ದಾರೆಂದು ಖುಷಿಯಾಗಿದ್ದು ವಿಪರ್ಯಾಸ.
ಇಲ್ಲಿದೆ ನೋಡಿ ವಿಡಿಯೋ:


