ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ವಿಜಯಪುರಲ್ಲಿ ಮಾತಾನಾಡಿದ ಯತ್ನಾಳ್, ಪಂಚಮಸಾಲಿ ಮೀಸಲಾತಿ ಹೋರಾಟದಿಂದಲೇ ಎಲ್ಲಾ ಲಿಂಗಾಯತ ಸಮಾಜದವರಿಗೆ 2ಡಿ ಮೀಸಲಾತಿ ಸಿಕ್ಕಿದೆ. ಬೊಮ್ಮಾಯಿಯವರು ನಮ್ಮ ಒತ್ತಡದಿಂದ ಪ್ರಧಾನಿ ಮಧ್ಯಸ್ಥಿಕೆಯಿಂದ,ಶೋಭಾ ಕರಂದ್ಲಾಜೆ ವಿಶೇಷ ಮುತುವರ್ಜಿ ಅಮೀತ್ ಶಾ ಅವರು ನಮ್ಮನ್ನು ಕರೆಸಿ ಮಾತನಾಡಿಸಿ ಎಲ್ಲ ವೀರಶೈವ ಲಿಂಗಾಯತರಿಗೆ ಮೀಸಲಾತಿ ನೀಡುವುದಾಗಿ ನಿರ್ಧಾರ ಆಗಿತ್ತು.
ಆದರೆ ಹೀಗೆ ಮಾಡಿದರೇ ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳ, ಹಾಲುಮತ ಸಮಾಜ ಎಸ್ಟಿ ಕೊಡಬೇಕಾಗುತ್ತದೆಂದು ನಮಗೆ ಮನವರಿಕೆ ಮಾಡಿದರು. ಬಳಿಕ 2ಡಿ ಮೀಸಲಾತಿ ಸಮಸ್ತ ಲಿಂಗಾಯತರಿಗೆ ನೀಡಿ, ಅದರ ಜೊತೆ ಮರಾಠರಿಗೆ ಜೈನರಿಗೆ ಕ್ರಿಶ್ಚಿಯನ್ ರಿಗೂ ಮೀಸಲಾತಿ ಕೊಟ್ಟರು ಪಂಚಮಸಾಲಿಯ ಮೀಸಲಾತಿ ಹೋರಾಟದಿಂದಲೇ ಇತರೆ ಎಲ್ಲಾ ಸಮಾಜದ ಜನರಿಗೂ ಮೀಸಲಾತಿ ಸಿಕ್ಕಿದೆ ಎಂದರು. ಆದರೆ ಮೀಸಲಾತಿ ಹೋರಾಟದಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ವೀರಶೈವ ಲಿಂಗಾಯಿತರಿಗೆ ಯಾವುದೇ ಅನುಕೂಲವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅದೇ ವೇಳೆ ಶಾಮನೂರು ಹಾಗೂ ಯಡಿಯೂರಪ್ಪ ವಿರುದ್ದವೂ ಕಿಡಿ ಕಾರಿ, ವೀರಶೈವ ಲಿಂಗಾಯತ ಮಹಾಸಭಾ ಕಾಂಗ್ರೆಸ್ಸಿನ ಕಂಪನಿಯಾಗಿದೆ. ಅಲ್ಲಿರೋರು ಖಂಡ್ರೆ ಹಾಗೂ ಶಾಮನೂರು ಅವರು ಕುಟುಂಬದವರು ಈಗ ನಡುವೆ ಯಡಿಯೂರಪ್ಪ ಕುಟುಂಬ ಬಂದಿದೆ ಬಿಎಸ್ ವೈ ವಿರುದ್ಧ ಮಾತಾನಾಡಿದರು.
ಅಂದು ಯಡಿಯೂರಪ್ಪ ಸಿಎಂ ಆದ ಬಳಿಕ ಮೂವರು ಲಿಂಗಾಯತ ನಾಯಕರು ಎಂದು ತೋರಿಸಲು ಅವರ ಪುತ್ರಿಯನ್ನು ಮಹಿಳಾ ವೀರೇಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷೆಯನ್ನಾಗಿ ಮಾಡಿದ್ದರು. ಆದ್ರೆ ಅವರು ಲಿಂಗಾಯತರ ಉದ್ಧಾರಕ್ಕೆ ಮಾಡಿಲ್ಲ ಎಂದು ಬಿಎಸ್ ವೈ ಕುಟುಂಬದವರ ವಿರುದ್ಧ ವಾಗ್ದಾಳಿ ನಡೆಸಿದರು.