ಪಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಶೀಘ್ರದಲ್ಲೇ ಭಾರತ ಪಾಕಿಸ್ತಾನದ ಜೊತೆ ಯುದ್ಧ ಸಾರುವ ಲಕ್ಷಣಗಳು ಕಾಣಿಸ್ತಿದೆ. ಅಲ್ಲದೇ ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಭಾರತದ ಸೇನೆ ನುಗ್ಗಿ ವಶಪಡಿಸಿಕೊಳ್ಳುತ್ತೆ ಅನ್ನೋ ಮಾತುಗಳು ಕೇಳಿಬರ್ತಿದೆ.
ಈ ಭಯದಲ್ಲೇ ಪಾಕಿಸ್ತಾನ ಈಗಾಗಲೇ ಕಂಗೆಟ್ಟಿದ್ದು, ಒಂದು ವೇಳೆ ಯುದ್ಧ ಸಂಭವಿಸಿದರೆ 2 ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳನ್ನ ಈಗಲೇ ಸಂಗ್ರಹಿಸುತ್ತಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಚೌಧರಿ ಅನ್ವರ್ ಉಲ್ ಹಕ್ 2 ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯಗಳನ್ನ ಸಂಗ್ರಹಿಸುವಂತೆ ಸೂಚನೆ ಕೊಟ್ಟಿದ್ದಾರೆ. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಾರತದ ಗಡಿ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿದೆ. 2 ತಿಂಗಳಲ್ಲಿ ಏನು ಬೇಕಾದರೂ ಆಗಬಹುದು. ಒಂದುವೇಳೆ ಯುದ್ಧ ಶುರುವಾದರೆ ಆಹಾರಕ್ಕೆ ಅಭಾವ ಬರುತ್ತೆ ಅಂತ ಈಗಲೇ ಮನಗಂಡಿರುವ ಪಾಕಿಸ್ತಾನ ಆಹಾರ ಸಂಗ್ರಹಿಸಲು ಮುಂದಾಗಿದೆ.