ಫ್ರೀಡಂ ಟಿವಿ ವಿಶೇಷರಾಜ್ಯವಿಶೇಷ

ಪಾಕಶಾಲಾ ಬೋರ್ಡ್ ವೈರಲ್.. ಏಕೆ?

ಇಬ್ಬರೋ ಮೂವರೋ ವ್ಯಕ್ತಿಗಳು ಒಂದೆಡೆ ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಸೇರಿದ್ರೆ ಸಾಮಾನ್ಯವಾಗಿ ಸಿನಿಮಾ, ರಾಜಕೀಯದ ಬಗ್ಗೆಯೇ ಹೆಚ್ಚು ಮಾತಾಡ್ತಾರೆ.. ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಚರ್ಚೆ, ವ್ಯವಹಾರಗಳು ಕೂಡ ನಡೆಯುತ್ತವೆ.. ಈ ಚರ್ಚೆಗಳು ಒಮ್ಮೆ ಶುರುವಾದ್ರೆ ಗಂಟೆಯಾದ್ರೂ ಮುಗಿಯಲ್ಲ.. ಹೀಗಾಗಿ ಬೆಂಗಳೂರಿನ ಪಾಕಶಾಲಾ ಹೋಟೆಲ್ ಮಾಲಿಕತ್ವ ಇದಕ್ಕೆ ಬ್ರೇಕ್ ಹಾಕಲು ನೋಡಿದೆ.

ಪಾಕಶಾಲಾ. ಶುಚಿ-ರುಚಿ ಸಸ್ಯಾಹಾರಿ ಅನುಭವಕ್ಕಾಗಿ
ಇಲ್ಲಿನ ಪೀಠೋಪಕರಣಗಳು ಊಟೋಪಚಾರಕ್ಕೆ ಮಾತ್ರ
ಭೂವ್ಯವಹಾರ, ರಾಜಕೀಯ ನಿಷ್ಕರ್ಷೆಗಳಿಗೆ ಅಲ್ಲ
ದಯವಿಟ್ಟು ಅರ್ಥ ಮಾಡಿಕೊಂಡು ಸಹಕರಿಸಿ..

ಹೀಗಂತ ಬೋರ್ಡ್ ಹಾಕಿದೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಹೊಟೆಲ್ ಬೋರ್ಡನ್ನು ಸಮರ್ಥಿಸಿದ್ರೆ, ಇನ್ನೂ ಕೆಲವರು ಇದೆಂಥಾ ನಿಯಮ ಎಂದು ಕಾಮೆಂಟ್ ಮಾಡ್ತಿದ್ದಾರೆ.

ಕೆಫೆ ಕಾಫಿ ಡೇಗೆ ಹೋದಾಗಲೂ ಇಂಥವರು ಕಾಣಿಸ್ತಾರೆ. ನಾಲ್ವರ ಮಧ್ಯೆ ಹೇಗೆ ವ್ಯವಹರಿಸಬೇಕು ಅನ್ನೋದು ಗೊತ್ತಾಗಲ್ಲ.. ಜೋರು ಜೋರಾಗಿ ಮಾತಾಡ್ತಾರೆ. ನನಗಾದ್ರೆ ಹೊಡೆದುಬಿಡಬೇಕು ಎನಿಸುತ್ತೆ ಎಂದು ಓರ್ವ ನೆಟ್ಟಿಗ ಕಾಮೆಂಟ್ ಹಾಕಿದ್ದಾರೆ.

ನಿಜವೇ ೨೦ ರೂಪಾಯಿಯ ಟೀ ಖರೀದಿಸಿ ಗಂಟೆ ಗಂಟೆ ಮಾತಾಡ್ತಾ ಕುಳಿತುಬಿಡ್ತಾರೆ. ಇದರಿಂದ ಪಕ್ಕದಲ್ಲಿ ಇರುವವರಿಗೆ ಅಸೌಕರ್ಯ ಫೀಲ್ ಆಗುತ್ತೆ.. ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ತಿನ್ನುತ್ತಿರುವಾಗ ರಾಜಕೀಯದ ಬಗ್ಗೆ ಚರ್ಚೆ ಮಾಡದೇ ಪೋಕೆಮನ್, ಡೋರೆಮನ್ ಬಗ್ಗೆ ಮಾತಾಡ್ಬೇಕಾ ಎಂದು ಇನ್ನೊಬ್ಬ ಯೂಸರ್ ಕೇಳಿದ್ದಾರೆ.. ಇನ್ನೊಬ್ಬರು ಫ್ಯಾಮಿಲಿ ಪಾಲಿಟಿಕ್ಸ್ ಓಕೆನಾ ಎಂದು ಕಾಮಿಡಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button