ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕ ಪ್ರವಾಸಿಗ ಮಂಜುನಾಥ್ ರಾವ್ ಮೃತಪಟ್ಟಿದ್ದಾರೆ. ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಉಗ್ರರ ದಾಳಿಗೆ ಬಲಿಯಾಗಿದ್ದು, ಕನಿಷ್ಠ 12 ಪ್ರವಾಸಿಗರು ಗಾಯಗೊಂಡಿದ್ದಾರೆ.
ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, 10 ಪ್ರವಾಸಿಗರು ಹಾಗೂ ಇಬ್ಬರು ಸ್ಥಳಿಯರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದೀಗ ಈ ಉಗ್ರರ ದಾಳಿಗೆ ಓರ್ವ ಕನ್ನಡಿಗನೇ ಬಲಿಯಾಗಿದ್ದು ತುಂಬಾ ಬೇಸರದ ಸಂಗತಿ.
ಮೃತ ಮಂಜುನಾಥ್ ಪತ್ನಿ ಪಲ್ಲವಿ, ಏಪ್ರಿಲ್ 19 ನೇ ತಾರೀಕಿಗೆ ಟ್ರಿಪ್ ಹೋಗಿದ್ದರು. ಅಲ್ಲಿ ಪಹಲ್ಗಾಮ್‌ಗೆ ತೆರಳಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ ಎಂದು ಪಲ್ಲವಿ ಹೇಳಿಕೆ ನೀಡಿದ್ದಾರೆ..
ಪಹಲ್ಗಾಮ್‌ನ ಮಿನಿ ಸ್ವಿಝರ್‌ಲ್ಯಾಂಡ್ ಅನ್ನೋ ಪ್ರವಾಸಿ ಸ್ಥಳಕ್ಕೆ ಕೆಳಗಿನಿಂದ ಸುಮಾರು 7 ಕಿ.ಮೀಟರ್‌ವರೆಗೆ ಕುದುರೆಗಳ ಮೂಲಕ ಪ್ರವಾಸಿಗರನ್ನ ಕರೆದುಕೊಂಡು ಹೋಗ್ತಾರೆ. ಆ ಪ್ರವಾಸಿ ಸ್ಥಳದಲ್ಲಿ 10 ರಿಂದ 15 ದಿನ ವೀಕ್ಷಣೆ ಮಾಡುತ್ತಿದ್ದ ಸಮಯದಲ್ಲಿ ಉಗ್ರರು ಏಕಾಏಕಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಿಂದಾಗಿ ಈಗಾಗಲೇ 10 ರಿಂದ 15 ಜನ ಸಾವನ್ನಪ್ಪಿರಬಹುದು ಎಂದು ಮೃತ ಮಂಜುನಾಥ್ ಪತ್ನಿ ಪಲ್ಲವಿ ಹೇಳಿದ್ದಾರೆ. ಇನ್ನು ಈ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಕೂಡಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಇನ್ನು ಪತ್ನಿ ಪಲ್ಲವಿ ಹೇಳಿರುವಂತೆ, ಕಾಶ್ಮೀರದಲ್ಲಿರುವ ಮಿನಿ ಸ್ವಿಝರ್‌ಲ್ಯಾಂಡ್ ಅನ್ನುವಂತಹ ಪ್ರವಾಸಿ ಸ್ಥಳದಲ್ಲಿರುವಾಗ ಗುಂಡಿನ ಸದ್ದು ಕೇಳಿಸಿದೆ. ಈ ವೇಳೆ ಏಕಾಏಕಿ ತನ್ನ ಗಂಡ ಮಂಜುನಾಥ್ ಮೇಲೆ ದಾಳಿಯಾಗಿದೆ. ಈ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.


