ಟೀಂ ಇಂಡಿಯಾ ಸ್ಟಾರ್ ಪೇಸರ್ ಮಹ್ಮದ್ ಶಮಿ..(Mohammed Shami) 2023ರ ಏಕದಿನ ವಿಶ್ವಕಪ್ ಫೈನಲ್ ನಂತರ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ.
ಹಿಮ್ಮಡಿ ಗಾಯದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ದೂರ ಆಗಿದ್ದಾರೆ. ಈ ಹಂತದಲ್ಲಿ ತಮ್ಮ ಹಿಮ್ಮಡಿಗೆ ಮಹ್ಮದ್ ಶಮಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಸೋಮವಾರ ಸಂಜೆ ಮಹ್ಮದ್ ಶಮಿಗೆ ಲಂಡನ್ನಲ್ಲಿ ಹಿಮ್ಮಡಿ ಶಸ್ತ್ರಚಿಕಿತ್ಸೆ ನಡೆದಿದೆ. ಈ ವಿಷಯವನ್ನು ಶಮಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆಪರೇಷನ್ ಯಶಸ್ವಿಯಾಗಿದೆ. ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಿದೆ.. ನಾನು ಮತ್ತೆ ಮೇಲೆದ್ದು ಮೈದಾನದಲ್ಲಿ ಕಾಣಿಸಿಕೊಳ್ಳಲು ಎದಿರು ನೋಡ್ತಿದ್ದೇನೆ
ಎಂದು ಶಮಿ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ತಾವು ಆಸ್ಪತ್ರೆ ಬೆಡ್ ಮೇಲರಿವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Just had a successful heel operation on my achilles tendon! 👟 Recovery is going to take some time, but looking forward to getting back on my feet. #AchillesRecovery #HeelSurgery #RoadToRecovery pic.twitter.com/LYpzCNyKjS
— 𝕸𝖔𝖍𝖆𝖒𝖒𝖆𝖉 𝖘𝖍𝖆𝖒𝖎 (@MdShami11) February 26, 2024
ಇದೇ ಕಾರಣದಿಂದ ಐಪಿಎಲ್-2024ಗೆ ಮಹ್ಮದ್ ಶಮಿ ದೂರ ಆಗಲಿದ್ದಾರೆ. ಮಹ್ಮದ್ ಶಮಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.