#Exclusive NewsTop News

ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದವರ ವಿರುದ್ಧ ಎಪ್ ಐ ಆರ್ ದಾಖಲಿಸಲು ಆದೇಶ..!

ಕೊಪ್ಪಳ; ಕೊಪ್ಪಳ ತಾಲೂಕಿನ ನಾರಾಯಣ ಪೇಟೆ ಹಾಗೂ ರಾಜಾರಾಮ್ ಪೇಟೆಯ ವ್ಯಾಪ್ತಿಯ ನದಿಯಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಲಾಗಿದ್ದು,ಕಲಬುರಗಿ ಪ್ರಾದೇಶೀಕ ಆಯುಕ್ತರಿಂದ ಕೊಪ್ಪಳ ಜಿಲ್ಲಾಧಿಕಾರಿಗೆ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದವರ ವಿರುದ್ಧ ಎಪ್ ಐ ಆರ್ ದಾಖಲಿಸಲು ಆದೇಶ ನನೀಡಲಾಗಿದೆ.

ಹಂಪಿ ಫೆದರ್ಸ್, ಹಂಪಿ ವಿಸ್ಕರ್ಸ್, ಹಂಪಿ ಬುಲ್ಡರ್ಸ್ ವಿರುದ್ಧ ಅಕ್ರಮವಾಗಿ ನದಿಯಲ್ಲಿ ರೆಸಾರ್ಟ್ ನಿರ್ಮಾಣದ ಆರೋಪ ಕೇಲಿ ಬಂದಿದ್ದು, ಈ ಹಿಂದೆ ಕೂಡ ರೆಸಾರ್ಟ್‌ ತೆರವಿಗೆ ಕೊಪ್ಪಳ ಡಿಸಿ ನಳೀನ್ ಅತುಲ್ಆ ದೇಶ ನೀಡಿದ್ದರು, ನಂತರ ತಮ್ಮ ಆದೇಶಕ್ಕೆ ತಡೆ ನೀಡಿದ್ದರು. ಇದರ ವಿರುದ್ಧವಾಗಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ರೆಸಾರ್ಟ್ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿತ್ತು. ಹಾಗೂ ಹೊಸಪೇಟೆ ಉಪವಿಭಾಗಾಧಿಕಾರಿ ಹಾಗೂ ಡಿಡಿಎಲ್ ಆರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ವರದಿ ಕೇಳಿದ್ದ ಪ್ರಾದೇಶಿಕ ಆಯುಕ್ತರು, ಇದರ ಹಿನ್ನಲೆ ತನಿಖಾ ತಂಡದ ವರದಿಯಂತೆ ಒತ್ತುವರಿ ಮಾಡಿರೋದು ಕೂಡ ಕಂಡು ಬಂದಿದೆ. ಈ ಹಿನ್ನೆಲೆ ಎಪ್ ಐ ಆರ್ ದಾಖಲಿಸಿ ಒತ್ತುವರಿ ತೆರವು ಗೊಳಿಸುವಂತೆ ಆದೇಶ ನೀಡಲಾಗಿದೆ.

Comments (0)

Your email address will not be published. Required fields are marked *

Back to top button