ರಾಜ್ಯ

ಗ್ರೇಟರ್​ ಬೆಂಗಳೂರಿಗೆ ವಿರೋಧ; 101 ಈಡುಗಾಯಿ ಒಡೆದು ವಾಟಾಳ್​ ಪ್ರೊಟೆಸ್ಟ್​

ಗ್ರೇಟರ್​​ ಬೆಂಗಳೂರು ಯೋಜನೆ ವಿರೋಧಿಸಿ ರಾಮನಗರದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​​ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ನಗರದ ಐಜೂರು ವೃತ್ತದಲ್ಲಿ ಈಡುಗಾಯಿ ಚಳುವಳಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 101 ಈಡುಗಾಯಿ ಒಡೆದು, ಕೂಡಲೇ ಗ್ರೇಟರ್ ಬೆಂಗಳೂರು ಯೋಜನೆ ಕೈಬಿಡುವಂತೆ ಒತ್ತಾಯ ಮಾಡಿದ್ದಾರೆ.

BBMP ಯನ್ನು ವಿಭಜನೆ ಮಾಡೋದು ಸರಿಯಲ್ಲ. ಬೆಂಗಳೂರು ಏನಾದ್ರು ವಿಭಜನೆ ಆದ್ರೆ ಕೆಂಪೇಗೌಡ್ರು ಕಟ್ಟಿದ ಬೆಂಗಳೂರು ಕನ್ನಡಿಗರ ಕೈತಪ್ಪಲಿದೆ. ಗ್ರೇಟರ್​ ಬೆಂಗಳೂರು ಬೇಡವೇ ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಮಹಾದಾಯಿ, ಕಳಸಾ ಬಂಡೂರಿ, ಮೇಕೇದಾಟು ಯೋಜನೆ ಜಾರಿ ಮತ್ತು ಕನ್ನಡಿಗರ ಮೇಲೆ ನಡೆದ ದಬ್ಬಾಳಿಕೆ ಬಗ್ಗೆ ಈಗಾಗಲೇ ಕರ್ನಾಟಕ ಬಂದ್​​ ಮಾಡಲಾಗಿದೆ. ಇನ್ನೂ ಏ.26ರಂದು ಕನ್ನಡಿಗರ ಎಲ್ಲಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಈಡುಗಾಯಿ ಒಡೆದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ರು.

Comments (0)

Your email address will not be published. Required fields are marked *

Back to top button