#Exclusive Newsರಾಜ್ಯ

‘ಆಪರೇಷನ್ ಕಾಶ್ಮೀರ ’-ಆಪತ್ಬಾಂಧವ ಸಂತೋಷ್​ ಲಾಡ್​​

ಬೆಂಗಳೂರು : ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 28 ಜನರು ಸಾವನ್ನಾಪ್ಪಿದ್ದಾರೆ.ಉಗ್ರರ ಅಟ್ಟಹಾಸಕ್ಕೆ ಕರ್ನಾಟಕದ ಇಬ್ಬರು ಪ್ರವಾಸಿಗರು ಬಲಿಯಾಗಿದ್ದಾರೆ.ಶಿವಮೊಗ್ಗದ ಮಂಜುನಾಥ್​ ಹಾಗೂ ಬೆಂಗಳೂರಿನ ಭರತ್​ ಭೂಷಣ್​  ದುಷ್ಕರ್ಮಿಗಳ ಅಟ್ಟಹಾಸಕ್ಕೆ ಸಾವನ್ನಪ್ಪಿದ್ದಾರೆ.

ಕಾಶ್ಮೀರದಲ್ಲಿರುವ ಕನ್ನಡಿಗರ ರಕ್ಷಣೆಗೆ ಸಚಿವ ಸಂತೋಷ್​ ಲಾಡ್​ ದೌಡಾಯಿಸಿದ್ದರು.ಸಿಎಂ ಸಿದ್ದರಾಮಯ್ಯ ಅವರು ವಹಿಸಿದ್ದ ಹೊಣೆಗಾರಿಕೆ ಲಾಡ್​ ಜವಬ್ದಾರಿಯುತವಾಗಿ ನಿರ್ವಹಿಸಿದ್ದಾರೆ.ಕಾಶ್ಮೀರದಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಕಾರ್ಮಿಕ ಸಚಿವ ಸಂತೋಷ್​ ಲಾಡ್​.

ಪ್ರವಾಸಕ್ಕೆಂದು ಕಾಶ್ಮೀರಕ್ಕೆ ತೆರಳಿದ್ದ 178 ಜನರನ್ನು ರಕ್ಷಣೆ ಮಾಡಿ ಕರೆತಂದ ಲಾಡ್​.ಇಂಡಿಗೋ ವಿಮಾನದ ಫ್ಲೈಟ್ ನಂಬರ್-6E 9198 ಮೂಲಕ ಬೆಂಗಳೂರಿಗೆ ಬಂದಿಳಿದ ಕರ್ನಾಟಕದ ಜನರು..ಇಂದು ಬೆಳಗ್ಗೆ 8:45ಕ್ಕೆ ಶ್ರೀನಗರ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಮೂಲಕ  ಪ್ರಯಾಣದ ಮೂಲಕ ತಾಯ್ನಾಡಿಗೆ ಬಂದಿಳಿದಿದ್ದಾರೆ.. ತಾಯ್ನಾಡಿಗೆ ಮರಳಿದ ತಕ್ಷಣ ನಿಟ್ಟುಸಿರು ಬಿಟ್ಟ ಪ್ರವಾಸಿಗರು.ನಾವು ಕ್ಷೇಮವಾಗಿ ರಾಜ್ಯಕ್ಕೆ ಬಂದಿರುವುದು ಖುಷಿ ಕೊಟ್ಟಿದೆ ಎಂದು ಪ್ರವಾಸಿಗರು.ಆದರೆ ಕಾಶ್ಮೀರದ ಪಹಲ್ಗಾಮ್ ಕ್ಷಣಗಳನ್ನ ನೆನೆದು ಕಣ್ಣೀರಿಟ್ಟ ಮಹಿಳಾ ಪ್ರವಾಸಿಗರು..

 

 

Comments (0)

Your email address will not be published. Required fields are marked *

Back to top button