ಬೆಂಗಳೂರು : ಅವನೊಬ್ಬ ಕ್ಯಾಬ್ ಚಾಲಕ..ಓಲಾ ಕಂಪನಿಗೆ ಕಾರ್ ಅಟ್ಯಾಚ್ ಮಾಡ್ಕೊಂಡು ಓಡಾಡಿಸುತ್ತಿದ್ದ..ಧಿಡೀರ್ ಶ್ರೀಮಂತಿಕೆಯ ಕನಸು ಕಂಡವನು ತನ್ನ ದೇವರಂತ ಕಸ್ಟಮರ್ಸ್ ಗೆ ಯಾಮಾರಿಸೋಕೆ ಶುರುಮಾಡ್ದ..ಇವನ ಚಾಲಕಿತನ ಹೇಗಿತ್ತು ಅಂದ್ರೆ, ನಾವು ನೀವು ಶಾಕ್ ಆಗಲೇಬೇಕು..ಒಂದು ಟ್ರಿಪ್ ಹೋದ್ರೆ, ಐದು ಸಾವಿರ ರೂಪಾಯಿ ಚಾರ್ಜ್ ಮಾಡುತ್ತಿದ್ದ ಕಿಲಾಡಿ.
ಹೌದು ಏರ್ ಪೋರ್ಟ್ನಿಂದ ಬೆಂಗಳೂರು ನಗರದಲ್ಲಿ ಎಲ್ಲೇ ಇಳಿದ್ರು, ಐದು ಸಾವಿರದ ಚಿಲ್ಲರೆ ಮೊತ್ತವನ್ನ ಪೀಕುತ್ತಿದ್ದ..ಇವನ ಪ್ಲಾನ್ ಕಂಡು ಪೊಲೀಸ್ರೆ ಕಂಗಲಾಗಿದ್ದಾರೆ. ಅಂದಾಗೆ ವಂಚಕನ ಹೆಸ್ರು ಭರತ್ ಅಂತ…ಇವನು ಬಳಕೆ ಮಾಡಿಕೊಂಡಿದ್ದು 5194ರೂಪಾಯಿ ಬಿಲ್ ತೋರಿಸೋ ಸ್ಕ್ರೀನ್ ಶಾಟ್.. ಹೌದು ಒಂದೇ ಸ್ಕ್ರೀನ್ ಶಾಟ್ ತೋರ್ಸಿ ಹತ್ತಾರು ಜನರಿಗೆ ಚಂಚನೆ ಮಾಡಿದ್ದ.
ಮೊದಲಿಗೆ ಓಲಾ ಆ್ಯಪ್ ಆನ್ ಮಾಡ್ಕೊಂಡು ರಾತ್ರಿ ವೇಳೆಯಲ್ಲಿ ಫೀಲ್ಡಿಗೆ ಬರುತ್ತಿದ್ದ ಆರೋಪಿಗೆ ಏರ್ ಪೋರ್ಟ್ ಬಾಡಿಗೆಗಳು ಹೆಚ್ಚಾಗಿ ಸಿಗ್ತಾ ಇದ್ವು… ಓಲಾ ಬುಕ್ ಮಾಡಿದ ಪ್ಯಾಸೆಂಜರ್ಸ್ ಇವನ ಕಾರು ಹತ್ತಿ ಕುಳಿತು ಬೆಂಗಳೂರಿಗೆ ಬಂದು ಬಿಲ್ ನೋಡಿದ್ರೆ ಶಾಕ್, ಮೊದಲೇ ರೆಡಿ ಇಟ್ಟುಕೊಂಡಿದ್ದ 5194ರೂಪಾಯಿಯ ಸ್ಕ್ರೀನ್ ಶಾಟ್ ತೋರಿಸುತ್ತಿದ್ದ.
ಪ್ರಯಾಣಿಕರು ಬಿಲ್ ನೋಡಿ ಶಾಕ್ ಆಗ್ತಿದ್ರು..ಏನಿದು ಇಷ್ಟೊಂದು ಬಿಲ್ ಬಂದಿದೆ ಅಂದ್ರೆ, ಅವರೊಟ್ಟಿಗೆ ಜಗಳಕ್ಕೆ ಇಳಿದು ಬಿಡ್ತಿದ್ದ..ಬೇಕಾದ್ರೆ ಕಸ್ಟಮರ್ ಕೇರಿಗೆ ಕಾಲ್ ಮಾಡಿ ಅನ್ನುತ್ತಿದ್ದ.. ನೈಟ್ ವೇಳೆಯಲ್ಲಿ ಓಲಾ ಕಸ್ಟಮರ್ ಕೇರ್ ಇರೋದಿಲ್ಲ.. ಇದನ್ನೇ ಎನ್ ಕ್ಯಾಶ್ ಮಾಡ್ಕೊಂಡು ಹಣ ಸುಲಿಗೆ ಮಾಡ್ತಿದ್ದ..ಪ್ಯಾಸೆಂಜರ್ ಒಬ್ಬರು ಕೊಟ್ಟ ದೂರಿನನ್ವಯ ಜಾಲ ಬೀಸಿದ್ರು…ಇದೀಗ ಕಿಲಾಡಿ ಡ್ರೈವರ್ ನನ್ನ ಏರ್ ಪೋರ್ಟ್ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ.