ಪಾಕಿಸ್ತಾನದ ಸ್ಟಾರ್ ಆಟಗಾರ (Pak cricketer) ಬಾಬರ್ ಆಜಂ (Babar Azam)ಮತ್ತೆ ಟೆಸ್ಟ್ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಆದರೆ, ಪಾಕ್ ತಂಡದ ಬದಲಾಗಿ ಆಫ್ಘಾನಿಸ್ತಾನ್ ಟೆಸ್ಟ್ ತಂಡದ ಸಾರಥಿಯಾಗಿ ಬಾಬರ್ ಆಜಂ ಕಾಣಿಸಿಕೊಂಡಿದ್ದಾರೆ. ಅರೇ ಇದೇನಿದು ಕೇಳಲಿಕ್ಕೆ ಶಾಕಿಂಗ್ ಅನಿಸ್ತಿದ್ಯಾ?ಅಸಲಿಗೆ ಏನಾಯ್ತು ಎಂಬುದನ್ನು ತಿಳಿದುಕೊಳ್ಳಲು ನೀವು ಈ ಸುದ್ದಿ ಓದಲೇಬೇಕು.
ಅಬುದಾಭಿ(Abudabi) ವೇದಿಕೆಯಲ್ಲಿ ಬುಧವಾರ ಐರ್ಲೆಂಡ್-ಆಫ್ಘಾನಿಸ್ತಾನದ ನಡುವೆ ಏಕೈಕ ಟೆಸ್ಟ್ ಪಂದ್ಯ ಶುರುವಾಗಿದೆ. ಆದರೆ, ಪಂದ್ಯದ ಆರಂಭಕ್ಕೆ ಮುನ್ನ ಅಧಿಕೃತ ಬ್ರಾಡ್ಕಾಸ್ಟರ್ಗಳು ಯಡವಟ್ ಮಾಡಿದ್ದಾರೆ. ಆಫ್ಘಾನಿಸ್ತಾನದ ನಾಯಕ ಹಸ್ಮತುಲ್ಲಾ ಷಾಹೀದಿ ಬದಲಿಗೆ ಬಾರ್ ಆಜಂರನ್ನು ಸ್ಕ್ರೀನ್ ಮೇಲೆ ತೋರಿಸಿದ್ದಾರೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
He's everywhere🥰😂
Jalwa hai Hamara😎#BabarAzam𓃵 pic.twitter.com/LdFqunZM5i— 𝑨𝙗𝒅𝙪𝒍𝙡𝒂𝙝 𝙎𝒖𝙡𝒕𝙖𝒏⁵⁶ (@Abdullahs_56) February 28, 2024
ಸ್ವಲ್ಪ ಹೊತ್ತಾದ ಮೇಲೆ ತಮ್ಮ ತಪ್ಪನ್ನು ಅರಿತುಕೊಂಡ ಬ್ರಾಡ್ಕಾಸ್ಟರ್ಗಳು ಬಾಬರ್ ಸ್ಥಾನದಲ್ಲಿ ಷಾಹೀದಿಯನ್ನು ರೀಪ್ಲೇಸ್ ಮಾಡಿದ್ದಾರೆ. ಆದರೆ, ಅಷ್ಟೊತ್ತಿಗೆ ಸ್ಕ್ರೀನ್ಶಾಟ್ ತೆಗೆದಿದ್ದ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಅದನ್ನು ಟ್ರೋಲ್ ಮಾಡಿದ್ದಾರೆ.
ಬಾಬರ್ ಆಜಂ ಯಾವ ಆಫ್ಘಾನಿಸ್ತಾನ ತಂಡ ಸೇರಿದ್ರು? ಏನಿದು ಮ್ಯಾಜಿಕ್..? ಇದು ನಿಜವೋ ಸುಳ್ಳೋ.. ಹೀಗೆ ತರಹೇವಾರಿಯಾಗಿ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
ಅಂದ ಹಾಗೆ, ವಿಶ್ವಕಪ್ ಟೂರ್ನಿಯಲ್ಲಿ ಕೆಟ್ಟ ಪ್ರದರ್ಶನದ ನಂತರ ಎಲ್ಲಾ ಫಾರ್ಮೆಟ್ಗಳಲ್ಲಿಯೂ ಪಾಕ್ ನಾಯಕತ್ವವನ್ನು ಬಾಬರ್ ಆಜಂ ತೊರೆದಿದ್ದರು. ಬಾಬರ್ ಸದ್ಯ ಪಾಕಿಸ್ತಾನ್ ಸೂಪರ್ ಲೀಗ್ – 2024(PSL-2024)ನಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.