ರಾಜ್ಯ

ಫ್ರೀಡಂ ಟಿವಿ ಬಿಗ್‌ ಇಂಪ್ಯಾಕ್ಟ್‌: ಅರಣ್ಯ ಅಧಿಕಾರಿ ಸಸ್ಪೆಂಡ್ ..!

ಫ್ರೀಡಂ ಟಿವಿ ಸುದ್ದಿ ಮಾಡಿ ಸದ್ದು ಮಾಡದೇ ಇರೋದಿಲ್ಲ ಅನ್ನೋದಿಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ರಾಯಬಾಗ ಶಾಸಕರೊಂದಿಗೆ ಅನುಚಿತವಾಗಿ ಮಾತನಾಡಿದ್ದ ಅರಣ್ಯ ಅಧಿಕಾರಿಯನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಗೋಕಾಕ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ರಾಯಭಾಗ ಶಾಸಕ ದುರ್ಯೋಧನ ಐಹೊಳೆಯವರಿಗೆ ಅವಾಜ್ ಹಾಕಿದ ಆಡಿಯೋವನ್ನ ಫ್ರೀಡಂ ಟಿವಿ ಬಿತ್ತರಿಸಿತ್ತು.. ಆ ಮೊಬೈಲ್ ಸಂಭಾಷಣೆ ಸಿಕ್ಕಪಟ್ಟೆ ವೈರಲ್ ಕೂಡ ಆಗಿತ್ತು.

ಅರಣ್ಯ ಅಧಿಕಾರಿ ಶಿವಾನಂದ ನಾಯಕವಾಡಿ ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಜೊತೆ ಮೊಬೈಲ್ ಸಂಭಾಷಣೆಯಲ್ಲಿ ಅಸಭ್ಯವಾಗಿ ಮಾತನಾಡಿದ್ರು. ಫ್ರೀಡಂ ಟಿವಿ ವರದಿ ಬಿತ್ತರಿಸಿದ ಬೆನ್ನಲ್ಲೇ ಗೋಕಾಕ್ DCF ಶಿವಾನಂದ್ ಗೆ ಸರ್ಕಾರ ನೋಟಿಸ್ ಜಾರಿ ಮಾಡಿತ್ತು. ಈಗ ಅಧಿಕಾರಿ ಶಿವಾನಂದ ನಾಯಕವಾಡಿ ಅವರಿಗೆ ಅಮಾನತು ಆದೇಶ ಹೊರಡಿಸಲಾಗಿದೆ. ಇನ್ನು ಆದೇಶ ಪ್ರತಿಯಲ್ಲಿ ಕಾರಣ ತಿಳಿಸದೆ ತಕ್ಷಣ ಅಮಾನತ್ತಿನಲ್ಲಿಡುವಂತೆ ಸೂಚಿಸಿದೆ.

Comments (0)

Your email address will not be published. Required fields are marked *

Back to top button